alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಶ್ರುತಿ ವಿನ್ನರ್, ಚಂದನ್ ರನ್ನರ್..!

12644913_10154011654281320_2317092321123445306_n

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ರ ಫಲಿತಾಂಶ ಏನಾಗಬಹುದು, ಫಿನಾಲೆಗೆ ಬಂದಿದ್ದ ಐವರಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಶ್ರುತಿ ವಿನ್ನರ್ ಆಗಿದ್ದಾರೆ. ಚಂದನ್ ರನ್ನರ್ ಆಗಿದ್ದು, ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೀಕ್ಷಕರ ಮನಸೆಳೆದಿದ್ದ ‘ಬಿಗ್ ಬಾಸ್ -3’ ಆರಂಭದಿಂದಲೂ ಕುತೂಹಲ ಕಾಯ್ದುಕೊಂಡಿತ್ತು. 15 ಮಂದಿ ಸ್ಪರ್ಧಿಗಳಲ್ಲಿ ಐವರು ಮಾತ್ರ ಫಿನಾಲೆಗೆ ಬಂದಿದ್ದರು. ಆರಂಭದಲ್ಲಿ ಹುಚ್ಚ ವೆಂಕಟ್ ಕಾರಣಕ್ಕೆ ಸುದ್ದಿಯಲ್ಲಿದ್ದ ಬಿಗ್ ಬಾಸ್ ಶೋ ನಂತರ ಮನೆಯಲ್ಲಿ ವಿವಿಧ ಟಾಸ್ಕ್ , ಭರಪೂರ ಮನರಂಜನೆಯಿಂದಾಗಿ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಬರಬರುತ್ತಾ ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿತ್ತು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶನಿವಾರ ಮತ್ತು ಭಾನುವಾರ ಸುದೀಪ್ ನಡೆಸಿಕೊಡುತ್ತಿದ್ದ ‘ವಾರದ ಕತೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೆ ವಿತ್ ಸುದೀಪ್’ ವೀಕ್ಷಕರನ್ನು ಸೆಳೆದಿದ್ದವು.

ಇದೀಗ ಮೂರನೇ ಸೀಸನ್ ಫಲಿತಾಂಶ ಪ್ರಕಟವಾಗಿದೆ. ಮೂರನೇ ಸೀಸನ್ ನಲ್ಲಿ ಶ್ರುತಿ ವಿನ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ ಅವರು ವಿಜೇತರಾಗಿದ್ದರು. ಮೂರನೇ ಸೀಸನ್ ನಲ್ಲಿ ಆನಂದ್, ಶ್ರುತಿ, ಪೂಜಾ ಗಾಂಧಿ, ಚಂದನ್, ರೆಹಮಾನ್ ಫಿನಾಲೆಗೆ ಬಂದಿದ್ದು, ಶ್ರುತಿ, ಆನಂದ್, ಪೂಜಾ ಮೇಲೆ ನಿರೀಕ್ಷೆ ಇತ್ತು. ಜನರ ಆಯ್ಕೆಯಂತೆ ಶ್ರುತಿ ಮೊದಲ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನ ಚಂದನ್ ಪಾಲಾಗಿದೆ ಎಂದು ಹೇಳಲಾಗಿದೆ. ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ಇಂದು ರಾತ್ರಿ ಪ್ರಸಾರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...