alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಶ್ರುತಿಗೆ ಟಾಂಗ್ ಕೊಟ್ಟ ಸುಷ್ಮಾ, ಪೂಜಾಗಾಂಧಿ

sushma45ಮಳೆ ಬಿಟ್ಟರೂ, ಮರದ ಹನಿ ನಿಲ್ಲಲ್ಲ ಎಂಬಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ಮುಕ್ತಾಯವಾಗಿದ್ದರೂ, ಸ್ಪರ್ಧಿಗಳ ನಡುವಿನ ವೈಮನಸ್ಸು ಕಡಿಮೆಯಾದಂತಿಲ್ಲ. ಎಲ್ಲರೂ
ಆತ್ಮೀಯರಾಗಿದ್ದೇವೆ ಎಂದು ಹೇಳಿಕೊಂಡಿದ್ದರಾದರೂ ಇದೀಗ ತಮ್ಮಲ್ಲಿನ ಅಸಮಾಧಾನ ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಸುಷ್ಮಾ ಅವರು, ಶ್ರುತಿಯೊಂದಿಗೆ ಯಾವ ಭಿನ್ನಾಭಿಪ್ರಾಯ ಹೊಂದಿರದಿದ್ದರೂ, ಆಕೆಯೇ ಹಳೆ ಜಿದ್ದು ಹೊಂದಿದ್ದೇನೆ ಎಂದೆಲ್ಲಾ ಆರೋಪ ಮಾಡಿದರು. ಅವರು ನನಗೇನು
ತೀರಾ ಹತ್ತಿರದವರಲ್ಲ, ನಮ್ಮ ಗುಬ್ಬಿ ಕಂಪನಿಯಲ್ಲಿ ಅವರ ತಂದೆ, ತಾಯಿ ಕೆಲಸ ಮಾಡಿದ್ದರು. ಅಷ್ಟಕ್ಕೆ ನನ್ನನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ನಾನು ಯಾರೊಂದಿಗಾದರೂ ಆತ್ಮೀಯವಾಗಿದ್ದರೆ, ಅದನ್ನು ಸಹಿಸಿಕೊಳ್ಳದೇ,
ಬೇರೆನನ್ನೋ ಹೇಳಿ ಅವರನ್ನು ಕರೆಯುತ್ತಿದ್ದರು ಎಂದು ಶ್ರುತಿ ವಿರುದ್ಧ ಆರೋಪ ಮಾಡಿದರು. ಅಡುಗೆ ಮನೆಯಲ್ಲಿ ಗಾಳಿ ಮಾತು, ಗಾಸಿಪ್ ಗಳಿಗೆ ಅವಕಾಶ ನೀಡಬಾರದೆಂಬುದು ನನ್ನ ಕಳಕಳಿ. ಆದರೆ, ಅವರು ಅಲ್ಲಿಯೇ ಇನ್ನೊಬ್ಬರ ಬಗ್ಗೆ ಮಾತನಾಡುತ್ತಿದ್ದರು. ಶ್ರುತಿ ವಿಷಯ ಹುಟ್ಟುಹಾಕುವುದರಲ್ಲಿ ಪರಿಣಿತಿ ಹೊಂದಿದ್ದಾರೆ ಎಂದೆಲ್ಲಾ ಸುಷ್ಮಾ ಹೇಳಿದರು.

ಪೂಜಾ ಗಾಂಧಿ ಮಾತನಾಡಿ, ನಾವೂ ಜೀವನದಲ್ಲಿ ಕಷ್ಟಪಟ್ಟಿದ್ದೇವೆ. ಶ್ರುತಿ ಅವರು ಮಾತ್ರ ಕಷ್ಟಪಟ್ಟಿದ್ದಾರೆ ಎನ್ನುವಂತೆ ಅದನ್ನೇ ಪದೇ, ಪದೇ ಹೇಳಿದರು. ನನ್ನ ಸಿನಿಮಾವನ್ನು ಚಂದ್ರಾಚೂಡ್ ಡೈರೆಕ್ಟ್ ಮಾಡುತ್ತಾರೆ ಎಂದಾಕ್ಷಣ ನಾನು ಎಲ್ಲವನ್ನು ಮಾತಾಡಿರುತ್ತೇನೆ ಎಂದರ್ಥವಲ್ಲ. ಸಿನಿಮಾ ಬಗ್ಗೆ ಮಾತ್ರ ಮಾತಾಡಿರುತ್ತೇವೆ. ಬಿಗ್ ಬಾಸ್ ಮನೆಗೆ ಸುಷ್ಮಾ ಬಂದ ನಂತರ ಬಾಂಧವ್ಯ ಜಾಸ್ತಿಯಾಯ್ತು ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...