alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಮಾಳವಿಕಾ ಸರ್ವಾಧಿಕಾರಿ ವರ್ತನೆ-ಪ್ರಥಮ್ ಗೆ ಶಿಕ್ಷೆ

bigb

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರೆಲ್ಲಾ ಆತ್ಮೀಯರಾಗಿರುವಂತೆ ಕಂಡು ಬಂದರೂ, ಒಬ್ಬರು ಮತ್ತೊಬ್ಬರ ಬಗ್ಗೆ ಮಾತನಾಡುವುದು ಮುಂದುವರೆದಿದೆ.

ಈ ವಾರ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ರಾಜ ಪರಂಪರೆ ಇತಿಹಾಸ ನೆನಪಿಸಲು ‘ರಾಣಿ ಮಹಾರಾಣಿ’ ಕಾಲ್ಪನಿಕ ಸಾಮ್ರಾಜ್ಯ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ಕ್ಯಾಪ್ಟನ್ ಮಾಳವಿಕಾ ಮಹಾರಾಣಿಯಾಗಿ, ಸಂಜನಾ ರಾಜಕುಮಾರಿಯಾಗಿದ್ದಾರೆ. ಮಹಾರಾಣಿ ಸರ್ವಾಧಿಕಾರಿಯಾಗಿದ್ದು, ಅವರ ನಿರ್ಣಯವೇ ಅಂತಿಮ ಎಂದು ‘ಬಿಗ್ ಬಾಸ್’ ಸೂಚನೆ ನೀಡಿದ್ದಾರೆ.

ರಾಜಕುಮಾರಿಯಾಗಿದ್ದ ಸಂಜನಾ, ನನಗೆ ಯಾರು ಕಡೆಗಣಿಸಿದ್ದಾರೆಯೋ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಭುವನ್ ಬಳಿ ಹೇಳಿಕೊಂಡಿದ್ದಾರೆ. ಮೋಹನ್– ಮಂತ್ರಿ, ಕೀರ್ತಿ- ಸೇನಾಧಿಪತಿ, ಶೀತಲ್ ಭಟರಾಗಿದ್ದಾರೆ. ಉಳಿದ ಸದಸ್ಯರು ಸಾಮಾನ್ಯ ಪ್ರಜೆಗಳಾಗಿದ್ದಾರೆ. ಮಹಾರಾಣಿಯ ಆಜ್ಞೆಯನ್ನು ಮೀರಿದರೆ ಶಿಕ್ಷೆ ವಿಧಿಸುವುದಾಗಿ ಮಹಾರಾಣಿ ಮಾಳವಿಕಾ ಎಚ್ಚರಿಕೆ ನೀಡಿದ್ದರು. ಇದನ್ನು ಮೀರಿದ ಕಾರಣಕ್ಕೆ ಪ್ರಥಮ್ ಗೆ ಶಿಕ್ಷೆ ನೀಡಲಾಗಿದೆ. ಕುತ್ತಿಗೆಯನ್ನು ಹಲಗೆಯಿಂದ ಸುತ್ತುವರೆದ ಪಟ್ಟಿಯಲ್ಲಿ ಬಂಧಿಯಾಗಿಸಿ ಅವರನ್ನು ನಿಲ್ಲಿಸಲಾಗಿತ್ತು.

ಸದಸ್ಯರಿಗೆ ವಿವಿಧ ಕೆಲಸಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಸಾಮಾನ್ಯ ಪ್ರಜೆಗಳಿಗೆ ಹಾಗೂ ಅರಮನೆಯವರಿಗೆ ಬೇರೆ ಅಡುಗೆ ಮಾಡಲು ಹೇಳಲಾಗಿತ್ತು. ಇದೆಲ್ಲದರಿಂದಾಗಿ ‘ಬಿಗ್ ಬಾಸ್’ ಮನೆಯೀಗ ಮಿನಿ ಸಾಮ್ರಾಜ್ಯದಂತಾಗಿದ್ದು, ಅರಮನೆಯ ಚಿತ್ರಣ ನೆನಪಿಸುವಂತಿದೆ.

ನಿರಂಜನ್ ಕುರಿತಾಗಿ ಮೋಹನ್, ಕೀರ್ತಿ, ಶೀತಲ್, ಮಾಳವಿಕಾ ಮೊದಲಾದವರು ಮಾತನಾಡಿಕೊಂಡಿದ್ದಾರೆ. ನಿರಂಜನ್ ನಾವೇನಾದರೂ ಅಂದರೆ ಪರ್ಸನಲ್ ಆಗಿ ತೆಗೆದುಕೊಳ್ತಾನೆ. ಆದರೆ, ಅವನೇನಾದರೂ ಹೇಳಿದಾಗ ಸುಮ್ಮನಿರಬೇಕೆಂದು ಹೇಳ್ತಾನೆ. ಮಹಾರಾಣಿ ನೀವು ಶಿಕ್ಷೆ ವಿಧಿಸಿ ಎಂದು ಹೇಳಿದ್ದಕ್ಕೆ ಫಿಟ್ಟಿಂಗ್ ಇಡಬೇಡಿ ಎಂದಿದ್ದು,  ಆದರೆ, ನಾನು ಮಂತ್ರಿ ಎಂದು ಆತನಿಗೆ ತಿಳಿಹೇಳಿದ್ದೇನೆ ಎಂದು ಮೋಹನ್ ಹೇಳಿಕೊಂಡರು.

ಕಾರುಣ್ಯ, ಭುವನ್, ನಿರಂಜನ್ ಮನೆಯ ಹೊರಗೆ ಚಾಪೆಯ ಮೇಲೆ ಮಲಗಿದ್ದಾರೆ. ಅರಮನೆಯಾಗಿದ್ದರೂ, ಸದಸ್ಯರ ನಡುವೆ ಗುಸುಗುಸು ಮುಂದುವರೆದಿದೆ.

ರಾಜ್ಯೋತ್ಸವ ಆಚರಿಸಿದ ಪ್ರಥಮ್:

‘ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಹಳದಿ ಟೀ ಶರ್ಟ್, ಕೆಂಪುಬಣ್ಣದ ಸ್ಕರ್ಟ್ ತೊಟ್ಟು ಬಂದ ಅವರು, ಮುಖಕ್ಕೆ ಅರಿಶಿಣ, ಕುಂಕುಮ ಬಳಿದುಕೊಂಡಿದ್ದಾರೆ. ಸ್ಕರ್ಟ್ ತೊಟ್ಟಿದ್ದೇಕೆ ಎಂದು ಸದಸ್ಯರು ಪ್ರಶ್ನಿಸಿದಾಗ, ಕೆಂಪುಬಣ್ಣದ ಚೆಡ್ಡಿ ಇರಲಿಲ್ಲ ಎಂದು ಪ್ರಥಮ್ ಸಮಜಾಯಿಷಿ ನೀಡಿದ್ದಾರೆ. ನಂತರ ಕಿಚನ್ ನಲ್ಲಿ ಸಿಂಕ್ ಬಳಿ ಪ್ರಥಮ್ ಮುಖಕ್ಕೆ ಅರಿಶಿಣ ಕುಂಕುಮ ಬಳಿದುಕೊಂಡಿದ್ದು, ಈ ಸಂದರ್ಭದಲ್ಲಿ ಕೆಳಗೆಲ್ಲಾ ಕುಂಕುಮ ಚೆಲ್ಲಿ ರಾಡಿಯಾಗಿದೆ. ಅದನ್ನು ಒರೆಸುವ ಪ್ರಯತ್ನದಲ್ಲಿ ಜಾಸ್ತಿಯಾಗಿದೆ. ಇದರ ಬಗ್ಗೆ ಮನೆಯ ಹೊರಗಿದ್ದ ಸದಸ್ಯರೆಲ್ಲಾ ಚರ್ಚೆ ನಡೆಸಿದ್ದಾರೆ.

ಮೊದಲಿಗೆ ಪ್ರಥಮ್ ಬಳಿ ಬಂದ ರೇಖಾ, ಹೀಗೆಲ್ಲಾ ಗಲೀಜು ಮಾಡಬೇಡಿ ಎಂದಾಗ, ಎಲ್ಲವನ್ನು ಕ್ಲೀನ್ ಮಾಡುತ್ತೇನೆ ಎಂದು ಪ್ರಥಮ್ ಹೇಳಿದರು. ಬಳಿಕ ಬಂದ ಮೋಹನ್, ಏನು ಅವತಾರನೋ ನಿಂದು. ನೀನು ಹೀಗೆಲ್ಲಾ ಗಲೀಜು ಮಾಡಿದರೆ ‘ಬಿಗ್ ಬಾಸ್’ ನಮಗೆ ಶಿಕ್ಷೆ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಕೃತವಾಗಿ ಮಾಡಿಲ್ಲ. ಶಿಕ್ಷೆ ಕೊಟ್ಟರೆ ನಾನು ಅನುಭವಿಸುತ್ತೇನೆ ಎಂದು ಹೇಳಿದ್ದಾರೆ. ಊಟದ ಬಗ್ಗೆ ಅಷ್ಟೆಲ್ಲಾ ಮಾತಾಡ್ತೀರಿ. ಇಲ್ಲೇ ಗಲೀಜು ಮಾಡಿದರೆ ಹೇಗೆ ಎಂದು ರೇಖಾ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರಥಮ್ ಕುಂಕುಮದ ಮೇಲೆ ಗೌರವವಿದೆ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಇದೇ ವಿಚಾರವಾಗಿ ಮೋಹನ್, ಓಂ ಪ್ರಕಾಶ್ ಅವರು ಮನೆಯನ್ನು ಕ್ಲೀನ್ ಆಗಿಟ್ಟುಕೊಳ್ಳಬೇಕು. ಇಂಗ್ಲೀಷ್ ಮಾತಾಡಬಾರದೆಂದು ಹೇಳಿದರೂ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಮಾತಾಡಿಕೊಂಡಿದ್ದಾರೆ. ನಂತರದಲ್ಲಿ ಅರಮನೆಯ ಚಟುವಟಿಕೆ ಆರಂಭವಾಗಿದ್ದು, ಮನೆಯ ವಾತಾವರಣ ಬದಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...