alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಸಿಕ್ತು ಬಿಗ್ ಆಫರ್

big-boss-kannada-28

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್-3’ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದಿದ್ದು, ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಯಾರು ಗೆಲ್ಲುತ್ತಾರೆ ಎಂಬ ಚರ್ಚೆಯೂ ಜೋರಾಗಿದೆ.

ಶ್ರುತಿ, ಪೂಜಾಗಾಂಧಿ, ಆನಂದ್, ಚಂದನ್, ರೆಹಮಾನ್ ಫಿನಾಲೆಗೆ ಬಂದಿದ್ದು, ‘ಬಿಗ್ ಬಾಸ್’, ಸ್ಪರ್ಧಿಗಳಿಗೆ ಯಾರು ವಿನ್ನರ್ ಎಂಬುದನ್ನು ಜನ ತೀರ್ಮಾನಿಸುತ್ತಾರೆ. ನಿಮಗೊಂದು ವಿಶೇಷ ಅವಕಾಶ ಇಲ್ಲಿದ್ದು, ಇಲ್ಲಿ 20 ಲಕ್ಷ ರೂ. ಹಣ ಇಡಲಾಗಿದೆ. ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದಾಗ, ಸದಸ್ಯರಲ್ಲಿ ಹಣದ ಬಗ್ಗೆ ಭಾರೀ ಚರ್ಚೆಯೇ ನಡೆಯಿತು. ಚಂದನ್, ನನಗೆ 20 ಲಕ್ಷ ರೂ. ದೊಡ್ಡ ಮೊತ್ತವೇ ಆದರೂ, ಕೊನೆ ವಾರದವರೆಗೂ ಜನ ವೋಟ್ ಮಾಡಿದ್ದಾರೆ ಎಂದು ಹೇಳಿದರೆ, ಶ್ರುತಿ, ನನಗೆ ಗೆದ್ದು ಬಾ ಎಂದು ಮಗಳು ಹೇಳಿರುವುದಾಗಿ ತಿಳಿಸಿದರು.

ಮನೆಯಲ್ಲಿರುವ ಸ್ಪರ್ಧಿಗಳಿಗೆ 20 ಲಕ್ಷ ರೂ. ಬಗ್ಗೆ ಮನಸ್ಸಿನಲ್ಲಿ ಆಸೆ ಇದ್ದರೂ ಅದನ್ನು ವ್ಯಕ್ತಪಡಿಸದೇ ವಿನ್ನರ್ ಆಗುವ ಬಗ್ಗೆಯೇ ಹೆಚ್ಚಿನ ಆಸಕ್ತಿ ತೋರಿದರು. ಅತಿಥಿಯಾಗಿ ಬಂದಿದ್ದ ಸುನಾಮಿ ಕಿಟ್ಟಿಯ ಜೊತೆಗೂ ಸದಸ್ಯರೆಲ್ಲಾ ಇದೇ ವಿಚಾರವಾಗಿ ಚರ್ಚೆ ನಡೆಸಿದರು. ಕೆಲ ಸ್ಪರ್ಧಿಗಳಿಗೆ ಹಣದ ಬಗ್ಗೆ ಆಸೆ ಜೊತೆಗೆ ಫೈನಲ್ ಮೇಲೂ ಪ್ರೀತಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...