alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯೊಳಗೋಗುವ ಸೆಲೆಬ್ರೆಟಿಗಳ್ಯಾರು…?

ಖ್ಯಾತ ನಟ ಕಿಚ್ಚ ಸುದೀಪ್ ನಿರೂಪಣೆಯ ಕನ್ನಡದ ‘ಬಿಗ್ ಬಾಸ್’ ಆರಂಭವಾಗಲು ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ ಗ್ರಾಂಡ್ ಓಪನಿಂಗ್ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸೆಲೆಬ್ರಿಟಿಗಳ ಜೊತೆ ಶ್ರೀ ಸಾಮಾನ್ಯರು ‘ಬಿಗ್ ಬಾಸ್’ ಮನೆ ಪ್ರವೇಶಿಸಲಿದ್ದು ಯಾರಾಗಲಿದ್ದಾರೆ ಸ್ಪರ್ಧಿಗಳು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಸೆಲೆಬ್ರಿಟಿಗಳ ಸ್ಪರ್ಧೆ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಈ ಬಾರಿ ಸ್ಪರ್ಧಿಗಳ ಪೈಕಿ ಶ್ರೀಸಾಮಾನ್ಯರೇ ಹೆಚ್ಚಿನ ಸಂಖ್ಯೆಯಲ್ಲಿರಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಸೆಲೆಬ್ರಿಟಿ ಸ್ಪರ್ಧಿಗಳ ಕುರಿತು ಸಂಭವನೀಯರ ಪಟ್ಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಕಾರ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್, 2017ರ ಮಿಸ್ ಕರ್ನಾಟಕ ಕಿರೀಟ ಧರಿಸಿದ್ದ ಶಾಲಿನಿ ಗೌಡ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಕಿರುತೆರೆಯ ಜನಪ್ರಿಯ ನಿರೂಪಕಿ ಹೇಮಲತಾ, ಶಾಸಕ ರಾಮದಾಸ್ ಜೊತೆಗಿನ ಪ್ರೇಮ ಪ್ರಕರಣದಿಂದ ವಿವಾದಕ್ಕೀಡಾಗಿರುವ ಪ್ರೇಮಾ ಕುಮಾರಿ, ತಿಥಿ ಚಿತ್ರದ ಗಡ್ಡಪ್ಪ ಖ್ಯಾತಿಯ ನಟ, ಜನಪ್ರಿಯ ಹಾಡುಗಳನ್ನು ಅತ್ಯಂತ ಕೆಟ್ಟದಾಗಿ ಹಾಡಿ ಕುಖ್ಯಾತಿ ಪಡೆದಿರುವ ತುಳಸಿ ಪ್ರಸಾದ್, ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನಾ, ನಟಿ ಶುಭಾ ಪೂಂಜಾ, ಗಾಯಕ ನವೀನ್ ಸಜ್ಜು, ಹಿರಿಯ ನಟಿ ಸುಮನ್ ರಂಗನಾಥ್ ಮೊದಲಾದವರು ಈ ಬಾರಿ ‘ಬಿಗ್ ಬಾಸ್’ ಮನೆ ಪ್ರವೇಶಿಸಲಿದ್ದಾರೆಂದು ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...