alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಭಾವನಾ ಜೊತೆ ಕಿಟ್ಟಿ ಭರ್ಜರಿ ಸ್ಟೆಪ್

srinagar-kitty-with-wife-bhavana

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋನಲ್ಲಿ ಸ್ಪರ್ಧಿಯಾಗಿದ್ದ ಭಾವನಾ ಬೆಳಗೆರೆ ಮತ್ತೆ ಕಿರುತೆರೆಯಲ್ಲಿ ಮಿಂಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೆ ಕಾಣಿಸಿಕೊಂಡಿರುವ ಭಾವನಾ ಬೆಳಗೆರೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ, ವೀಕ್ಷಕರ ಮನಸೆಳೆದ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ನಲ್ಲಿ ಪ್ರೇಮಿಗಳ ದಿನಾಚರಣೆ ಅಂಗವಾಗಿ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಶ್ರೀನಗರ ಕಿಟ್ಟಿ, ಭಾವನಾ ಹಾಗೂ ಇಂದ್ರಜಿತ್ ಲಂಕೇಶ್ ದಂಪತಿ ‘ಮಜಾ ಟಾಕೀಸ್’ ವೇದಿಕೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಶ್ರೀನಗರ ಕಿಟ್ಟಿ ಹಾಗೂ ಭಾವನಾ ಬೆಳಗೆರೆ ವೇದಿಕೆಯಲ್ಲಿ ‘ಹುಡುಗರು’ ಸಿನಿಮಾದ ‘ತೊಂದ್ರೆ ಇಲ್ಲ ಪಂಕಜ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಫೆಬ್ರವರಿ 14ರಂದು ಭಾನುವಾರ ರಾತ್ರಿ 8 ಗಂಟೆಗೆ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ‘ಮಜಾ ಟಾಕೀಸ್’ನಲ್ಲಿ ಈ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ‘ಬಿಗ್ ಬಾಸ್-3’ರಲ್ಲಿ ಸ್ಪರ್ಧಿಯಾಗಿದ್ದ ಭಾವನಾ ಬೆಳಗೆರೆ ಅವರು ವೀಕ್ಷಕರ ಮೆಚ್ಚುಗೆ ಗಳಿಸಿದ್ದರು

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...