alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳು, ಸೊಸೆ, ಮೊಮ್ಮಗಳ ಫೋಟೋ ಅಪ್ ಲೋಡ್ ಮಾಡಿದ ಬಿಗ್ ಬಿ

Aishwarya_Amitabh11

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ನಟರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಒಬ್ಬರು. ಸದಾ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ ಅಮಿತಾಬ್ ಬಚ್ಚನ್.

ಈಗ ಮಗಳು ಶ್ವೇತಾ, ಸೊಸೆ ಐಶ್ವರ್ಯ ರೈ ಬಚ್ಚನ್, ಮೊಮ್ಮಗಳು ಆರಾಧ್ಯ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಮಾಲ್ಡೀವ್ ಬೀಚ್ ನಲ್ಲಿ ಮೂವರೂ ಒಟ್ಟಿಗೆ ಕುಳಿತಿರುವ ಈ ಫೋಟೋ ಬಹಳ ಗಮನ ಸೆಳೆಯುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದು ಮಾಲ್ಡೀವ್ ಬೀಚ್ ನಲ್ಲಿ ಅಮಿತಾಬ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ಬಚ್ಚನ್, ಮೊಮ್ಮಗಳು ಆರಾಧ್ಯ ಹಾಗೂ ಮಗಳು ಶ್ವೇತಾ ಒಟ್ಟಿಗಿರುವ ಫೋಟೋವನ್ನು ಹಾಕಿದ್ದರು.

ಫೋಟೋ ಅಪ್ ಲೋಡ್ ಮಾಡಿರುವ ಬಚ್ಚನ್ ತಮ್ಮ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸ್ಪೆಷಲ್ ಆಗಿರ್ತಾರೆ. ಇದು ಮುಂದೆಯೂ ಇರುತ್ತೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...