alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಿ ಮಂದಿರದಲ್ಲಿ ಅಮಿತಾಬ್ ಚಪ್ಪಲಿಗೂ ನಡೆಯುತ್ತೆ ಪೂಜೆ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ದೇವಸ್ಥಾನ ಕಟ್ಟಲಾಗಿದೆ. ಕೋಲ್ಕತ್ತಾದಲ್ಲಿ ಈ ದೇವಸ್ಥಾನವಿದೆ. ಅಲ್ಲಿ ಅಮಿತಾಬ್ ಬಚ್ಚನ್ ಮೂರ್ತಿ ಜೊತೆ ಅವರ ಚಪ್ಪಲಿಗೂ ಪೂಜೆ ನಡೆಯುತ್ತದೆ. ಬಿಗ್ ಬಿ ಅಕ್ಟೋಬರ್ 11ರಂದು 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಮಂದಿರದಲ್ಲಿ ಹುಟ್ಟುಹಬ್ಬಕ್ಕಾಗಿ ವಿಶೇಷ ತಯಾರಿಗಳು ನಡೆದಿವೆ.

ಬಾಲಿವುಡ್ ಗೆ ಎಂಟ್ರಿಯಾಗುವ ಮೊದಲು ಅಮಿತಾಬ್ ಬಚ್ಚನ್ ಕೋಲ್ಕತ್ತಾದಲ್ಲಿ ಕೆಲಸ ಮಾಡ್ತಿದ್ದರು. ಮುಂಬೈಗೆ ಹೋಗುವ ಮೊದಲು ಅನೇಕ ವರ್ಷ ಕೋಲ್ಕತ್ತಾದಲ್ಲಿದ್ದ ಅಮಿತಾಬ್ ಅಲ್ಲಿಯೇ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಮಿತಾಬ್ ಬಚ್ಚನ್ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕೋಲ್ಕತ್ತಾ ಅಭಿಮಾನಿಗಳು ಬಿಗ್ ಬಿ ಮಂದಿರ ನಿರ್ಮಾಣ ಮಾಡಿ ಪ್ರತಿದಿನ ಪೂಜೆ ಮಾಡ್ತಾರೆ.

ಪ್ರತಿದಿನ ಅಮಿತಾಬ್ ಮೂರ್ತಿಗೆ ಆರತಿ ಬೆಳಗಲಾಗುತ್ತದೆ. ಜೊತೆಗೆ ಅಮಿತಾಬ್ ಚಪ್ಪಲಿಗೂ ಪೂಜೆ ನಡೆಯುತ್ತದೆ. ಒಂಭತ್ತು ಪುಟಗಳ ಅಮಿತಾಬ್ ಚಾಲೀಸ್ ಓದಲಾಗುತ್ತದೆ. ನಂತ್ರ ಅಭಿಮಾನಿಗಳಿಗೆ ಪ್ರಸಾದ ನೀಡಲಾಗುತ್ತದೆ.

16 ವರ್ಷಗಳ ಹಿಂದೆ ಬಿಗ್ ಬಿ ದೊಡ್ಡ ಅಭಿಮಾನಿ ಸಂಜಯ್ ಪಟೌಡಿಯಾ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. 2001ರಲ್ಲಿ ಕೇವಲ ಬಿಗ್ ಬಿ ಫೋಟೋ ಇಟ್ಟು ಪೂಜೆ ಮಾಡಲಾಗ್ತಾಯಿತ್ತು. ಆದ್ರೀಗ ಮೂರ್ತಿ ಇಟ್ಟು ಪೂಜೆ ಮಾಡಲಾಗ್ತಿದೆ. ಜೊತೆಗೆ ಅಗ್ನಿಪಥ್ ನಲ್ಲಿ ಅಮಿತಾಬ್ ಹಾಕಿದ್ದ ಚಪ್ಪಲಿ ಜೊತೆಗೆ ಅಮಿತಾಬ್ ಚಿತ್ರದಲ್ಲಿ ಬಳಸಲಾಗಿದ್ದ ಖುರ್ಚಿಯನ್ನು ಇಲ್ಲಿಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...