alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಭೋಜ್ಪುರಿ ನಟಿಯ ಡಾನ್ಸ್ ವಿಡಿಯೋ

ಪಾಕಿಸ್ತಾನದ ಖ್ಯಾತ ಗಾಯಕ ನುಸ್ರತ್ ಫತೇ ಆಲಿ ಖಾನ್ ರ ‘ಮೇರೆ ರಶ್ಕೆ ಖಮರ್’ ಹಾಡನ್ನು ಅಜಯ್ ದೇವಗನ್, ಇಲಿಯಾನಾ ಅಭಿನಯದ ಚಿತ್ರವೊಂದರಲ್ಲಿ ಬಳಸಿಕೊಳ್ಳಲಾಗಿದ್ದು, ಇದನ್ನು ರಾಹತ್ ಫತೇ ಆಲಿ ಖಾನ್ ಹಾಡಿದ್ದರು.

ಈ ಜನಪ್ರಿಯ ಹಾಡನ್ನು ಪಾಕಿಸ್ತಾನದ ಗಾಯಕಿ ಫಾದಿಯಾ ಶಬ್ರೂಜ್ ಕೂಡಾ ಹಾಡಿದ್ದು, ಇದಕ್ಕೆ ಖ್ಯಾತ ಬೋಜ್ಪುರಿ ನಟಿ ರಾಣಿ ಚಟರ್ಜಿ ಹೆಜ್ಜೆ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೂ ಟ್ಯೂಬ್ ನಲ್ಲಿ ರಾಣಿ ಚಟರ್ಜಿ ಎಂಟರ್ಟೈನ್ಮೆಂಟ್ ಎಂಬ ಚಾನೆಲ್ ನಡೆಸುತ್ತಿರುವ ರಾಣಿ ಚಟರ್ಜಿ ಇಲ್ಲಿ ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ರಾಣಿ ಚಟರ್ಜಿಯ ಯೂ ಟ್ಯೂಬ್ ಚಾನೆಲ್ ಗೆ ಸಾಕಷ್ಟು ಮಂದಿ ಸದಸ್ಯರಿದ್ದು, ಅವರಿಗಾಗಿಯೇ ರಾಣಿ ಆಗಾಗ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅಲ್ಲದೇ ಚಿತ್ರರಂಗದಲ್ಲಿಯೂ ರಾಣಿ ಜನಪ್ರಿಯತೆ ಗಳಿಸಿದ್ದು, ಮನೋಜ್ ತಿವಾರಿ ಜೊತೆಗಿನ ‘ಸಸುರಾ ಬಡಾ ಪೈಸಾವಾಲಾ’ ಚಿತ್ರ ಬಾಕ್ಸಾಫೀಸ್ ನಲ್ಲಿ 35 ಕೋಟಿ ರೂ. ಗಳಿಕೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...