alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಫೋಟಕ ಮಾಹಿತಿ ಬಿಚ್ಚಿಟ್ಳು ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ನಟಿ

ಪವನ್ ಸಿಂಗ್ ಹಿರೋಯಿನ್ ದಿಯಾ ಸಿಂಗ್ ಹೈಪ್ರೊಫೈಲ್ ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದು ಸುದ್ದಿಯಾಗಿದ್ದಳು. ಹೈದ್ರಾಬಾದ್ ಪೊಲೀಸರು ಇದೇ ವರ್ಷ ಜುಲೈನಲ್ಲಿ ತೆಲಂಗಾಣದ ಫೈವ್ ಸ್ಟಾರ್ ಹೊಟೇಲ್ ಒಂದರ ಮೇಲೆ ದಾಳಿ ನಡೆಸಿ ಸೆಕ್ಸ್ ರಾಕೆಟ್ ಬಣ್ಣ ಬಯಲು ಮಾಡಿದ್ದರು. ಇದ್ರಲ್ಲಿ ಬೋಜ್ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಹಾಗೂ ಆಕ್ಷನ್ ಸ್ಟಾರ್ ಯಶ್ ಕುಮಾರ್ ಜೊತೆ ನಟಿಸಿದ್ದ ನಟಿ ದಿಯಾ ಸಿಂಗ್ ಳನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣವನ್ನು ಖುಲಾಸೆಗೊಳಿಸಿರುವ ಕೋರ್ಟ್, ದಿಯಾ ಸಿಂಗ್ ಗೆ ಕ್ಲೀನ್ ಚಿಟ್ ನೀಡಿದೆ. ಜೈಲಿನಿಂದ ಹೊರ ಬಂದಿರುವ ದಿಯಾ, ಪ್ರಕರಣದ ಬಗ್ಗೆ ಮಾತನಾಡಿದ್ದಾಳೆ. ತನ್ನನ್ನು ಈ ರಾಕೆಟ್ ನಲ್ಲಿ ಸಿಕ್ಕಿಹಾಕಿಸಲಾಗಿದೆ ಎಂದು ದಿಯಾ ಹೇಳಿದ್ದಾಳೆ. ಸಿನಿಮಾ ಆಸೆ ತೋರಿಸಿ ಹೈದ್ರಾಬಾದ್ ಗೆ ಕರೆಯಲಾಗಿತ್ತು.

ನಿರ್ದೇಶಕರು ಹಾಗೂ ನಿರ್ಮಾಪಕರು ಮಾತುಕತೆಗಾಗಿ ಹೊಟೇಲ್ ರೂಮಿಗೆ ಬಂದಿದ್ದರು. ಈ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ. ಇದ್ರ ಹಿಂದೆ ಪೊಲೀಸ್ ಕೈವಾಡವೂ ಇದೆ ಎಂದು ದಿಯಾ ಹೇಳಿದ್ದಾಳೆ. ಈಗ ಕೋರ್ಟ್ ನ್ಯಾಯ ನೀಡಿದೆ ಎಂದು ದಿಯಾ ಖುಷಿ ವ್ಯಕ್ತಪಡಿಸಿದ್ದಾಳೆ. ಜನಾರ್ದನ್ ಹಾಗೂ ಜೋನಿ ಎಂಬುವವರು ನಟಿಯನ್ನು ಹೊಟೇಲ್ ಗೆ ಕರೆದಿದ್ದರಂತೆ. ಅವ್ರು ನಕಲಿ ನಿರ್ದೇಶಕ ಹಾಗೂ ನಿರ್ಮಾಪಕರು. ಪ್ರತಿ ಬಾರಿ ಕಲಾವಿದರನ್ನು ಹೊಟೇಲ್ ಗೆ ಕರೆದು ಮಾತುಕತೆಯಾಡುವ ನಾಟಕವಾಡ್ತಾರೆ. ಇದೇ ವೇಳೆ ಪೊಲೀಸರು ರೈಡ್ ಮಾಡ್ತಾರೆ. ಸಿಕ್ಕಿಬಿದ್ದವರನ್ನು ಬಿಡಲು 10ರಿಂದ 20 ಸಾವಿರ ವಸೂಲಿ ಮಾಡ್ತಾರೆ ಎಂದು ದಿಯಾ ಆರೋಪ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...