alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಿದ್ಧ ನಟಿಗೆ ಡರ್ಟಿ ಗರ್ಲ್ ಎಂದ ನಿರ್ಮಾಪಕ

ಭೋಜ್ಪುರಿ ನಟಿ ಅಮ್ರಪಾಲಿ ದುಬೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚಿತ್ರ ನಿರ್ಮಾಪಕ ದಿಲೀಪ್ ಜೈಸ್ವಾಲ್ ಅಮ್ರಪಾಲಿ ವಿರುದ್ಧ ಫೇಸ್ಬುಕ್ ನಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ನಟಿ ಅಮ್ರಪಾಲಿಯಿಂದ ತನಗೆ 8 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ದಿಲೀಪ್ ಹೇಳಿದ್ದಾರೆ.

ಅಮ್ರಪಾಲಿ ಭೋಜ್ಪುರಿ ಸಿನಿ ಜಗತ್ತಿನ ಪ್ರಸಿದ್ಧ ನಟಿಗಳಲ್ಲಿ ಒಬ್ಬಳು. ಆಕೆ ವಿರುದ್ಧ ಇಂಥ ಆರೋಪ ಕೇಳಿ ಬಂದಿರುವುದು ಚರ್ಚೆಯ ವಿಷ್ಯವಾಗಿದೆ. ದಿಲೀಪ್ ಫೇಸ್ಬುಕ್ ನಲ್ಲಿ ಅಮ್ರಪಾಲಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಮ್ರಪಾಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐದು ಚಿತ್ರ ಮಾಡಿದ ಮೇಲೆ ಒಬ್ಬ ನಟಿಯಿಂದ ಮೋಸವಾಯ್ತು. ಆಕೆ ಬೇರ್ಯಾರೂ ಅಲ್ಲ ಅಮ್ರಪಾಲಿ. ಹಣ ತೆಗೆದುಕೊಂಡು ಒಂದು ದಿನ ಶೂಟಿಂಗ್ ಗೆ ಬಂದ ನಟಿ ಮೋಸ ಮಾಡಿದ್ದಾಳೆ. ಒಂದು ದಿನಕ್ಕೆ 1 ಲಕ್ಷ 50 ಸಾವಿರ ರೂಪಾಯಿಗೆ ಒಪ್ಪಂದವಾಗಿತ್ತು. ಅರ್ಧ ಚೆಕ್ ನಲ್ಲಿ ಹಾಗೂ ಅರ್ಧ ಹಣವನ್ನು ನೀಡಿದ್ದೆ. ಒಂದು ದಿನ ಶೂಟಿಂಗ್ ಗೆ ಬಂದ ನಟಿ ಚೆಕ್ ಬೇಡ ಹಣ ಬೇಕು ಎಂದಿದ್ದಾಳೆ. ಮಧ್ಯರಾತ್ರಿ 3 ಗಂಟೆಗೆ ಎಲ್ಲಿಂದ ಹಣ ತರಲಿ ಎಂದು ಪ್ರಶ್ನೆ ಮಾಡಿದೆ. ಇದ್ರಿಂದ ಕೋಪಗೊಂಡು ಶೂಟಿಂಗ್ ಗೆ ಬರಲಿಲ್ಲ. ನನಗೆ 8 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ದಿಲೀಪ್ ಹೇಳಿದ್ದಾರೆ.

ಅಮ್ರಪಾಲಿಗೆ ಸಿನಿಮಾದಲ್ಲಿ ಜಾಗ ನೀಡಬೇಡಿ. ಜನರಿಗೂ ನಾನು ವಿನಂತಿ ಮಾಡ್ತೆನೆ. ಡರ್ಟಿ ಗರ್ಲ್ ಹಾಗೂ ಅಪ್ರಾಮಾಣಿಕ ವ್ಯಕ್ತಿಗೆ ದಯವಿಟ್ಟು ಬೆಂಬಲ ನೀಡಬೇಡಿ ಎಂದು ದಿಲೀಪ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...