alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಮೇಲೆ ಅತ್ಯಾಚಾರವೆಸಗಿದ್ದ ನಾಯಕ ನಟ ಅರೆಸ್ಟ್

Arrest1

ಸಿನಿಮಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಆಗಾಗ ಸೆಲೆಬ್ರಿಟಿಗಳು ಹೇಳುವುದುಂಟು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎಂತೆಂತಹ ಕಷ್ಟ ಅನುಭವಿಸಬೇಕಾಯಿತೆಂಬುದನ್ನು ಹೇಳುವ ಮೂಲಕ ಈ ಕ್ಷೇತ್ರದಲ್ಲಿಯೂ ನಡೆಯುವ ಘಟನೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ ನಟಿಯೊಬ್ಬರ ಮೇಲೆ ನಟನೊಬ್ಬ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಭೋಜ್ಪುರಿ ನಟ ಮತ್ತು ನಿರ್ಮಾಪಕ ಶ್ಯಾಮ್ ಚರಣ್ ಯಾದವ್, ಪಾಕಿಸ್ತಾನಿ ಮೂಲದ 42 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಕೇಸು ದಾಖಲಿಸಿಕೊಂಡಿರುವ ಮೀರಾ ರೋಡ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಾಕ್ ಮೂಲದ ನಟಿಗೆ ಮದುವೆಯಾಗಿ ಮಕ್ಕಳಿದ್ದು, ಭಾರತೀಯ ಚಿತ್ರರಂಗದಲ್ಲಿ ಅವಕಾಶ ಸಿಗಬಹುದೆಂದು ಇಲ್ಲಿಗೆ ಬಂದಿದ್ದರು.

2012 ರಲ್ಲಿ ನಡೆದ ಚಿತ್ರರಂಗದ ಪಾರ್ಟಿಯೊಂದರಲ್ಲಿ ಇಬ್ಬರೂ ಪರಿಚಿತರಾಗಿದ್ದು, ನಂತರ ಚಿತ್ರವೊಂದರಲ್ಲಿ ಇಬ್ಬರೂ ನಟಿಸಿದ್ದರು. ನಟಿಗೆ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ಆಕೆಯಿಂದ 35.80 ಲಕ್ಷ ರೂ. ಹಣ ಪಡೆದುಕೊಂಡಿದ್ದ ಶ್ಯಾಮ್ ಚರಣ್ ಯಾದವ್ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈಗ ಹಣ ಕೊಡದೇ ಬಬ್ಲೂ ರಾಯ್ ಮತ್ತು ಟೈಗರ್ ಎಂಬವರ ಮೂಲಕ ಬೆದರಿಕೆ ಹಾಕಿಸಿದ್ದಾನೆ ಎಂದು ನಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬಬ್ಲೂ ಹಾಗೂ ಟೈಗರ್ ತಲೆಮರೆಸಿಕೊಂಡಿದ್ದು, ಶ್ಯಾಮ್ ಚರಣ್ ಯಾದವ್ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...