alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ಧ್ರುವ ಸರ್ಜಾ ‘ಭರ್ಜರಿ’ ಎಂಟ್ರಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಸೆಪ್ಟಂಬರ್ 15 ರಂದು ತೆರೆ ಕಾಣಲಿದೆ. ಈಗಾಗಲೇ ಟೀಸರ್, ಹಾಡುಗಳ ಮೂಲಕ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿರುವ ‘ಭರ್ಜರಿ’ ಆರ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ.

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಹಿಂದೆಯೇ ಆರಂಭವಾಗಿತ್ತಾದರೂ, ಕಾರಣಾಂತರದಿಂದ ಪ್ರೇಕ್ಷಕರೆದುರಿಗೆ ಬರುವುದು ತಡವಾಗಿದೆ. ಧ್ರುವ ಸರ್ಜಾ ಅವರೊಂದಿಗೆ ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ಮೊದಲಾದವರು ಅಭಿನಯಿಸಿದ್ದಾರೆ.

ಹಾಡು, ಫೈಟಿಂಗ್, ಖಡಕ್ ಡೈಲಾಗ್ ಒಳಗೊಂಡ ಟ್ರೇಲರ್ ಈಗಾಗಲೇ ಅಭಿಮಾನಿಗಳನ್ನು ಸೆಳೆದಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ.

ನಾಳೆಯಿಂದ ತೆರೆಯ ಮೇಲೆ ಆಕ್ಷನ್ ಪ್ರಿನ್ಸ್ ‘ಭರ್ಜರಿ’ಯಾಗಿ ಎಂಟ್ರಿ ಕೊಡಲಿದ್ದು, ಅಭಿಮಾನಿಗಳಿಗೆ ರಸದೌತಣ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...