alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಚಿತ್ರಕ್ಕೆ ಎದುರಾಗಿದೆಯಾ ಆರ್ಥಿಕ ಸಂಕಷ್ಟ…?

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದ ಮೊದಲ ಲುಕ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆಯಾಗಿದೆ. ಫೋಟೋದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಈಗ ಇನ್ನೊಂದು ವಿಚಾರಕ್ಕೆ ಭಾರತ್ ಚಿತ್ರ ಸುದ್ದಿಗೆ ಬಂದಿದೆ.

ಭಾರತ್ ಚಿತ್ರದ ಸಹ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿದೆ ಎನ್ನಲಾಗಿದೆ. ದೈನಂದಿನ ವೇತನ ಪಡೆಯಲಿರುವ ಸಹ ಕಲಾವಿದರಿಗೆ 350 ರೂಪಾಯಿ ಚೆಕ್ ನೀಡಲಾಗಿತ್ತು. ಆದ್ರೆ ಈ ಚೆಕ್ ಬೌನ್ಸ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಸಹ ಕಲಾವಿದರು ಶೂಟಿಂಗ್ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕೆಲವರಿಗೆ ಹಣವನ್ನು ನೀಡಲಾಗಿದೆಯಂತೆ.

ಅಲಿ ಅಬ್ಬಾಸ್ ನಿರ್ದೇಶನದಲ್ಲಿ 200 ಕೋಟಿ ವೆಚ್ಚದಲ್ಲಿ ಚಿತ್ರ ತೆರೆಗೆ ಬರ್ತಿದೆ. ಈ ಹಿಂದೆ ಪ್ರಿಯಾಂಕ ಚೋಪ್ರಾ ವಿಚಾರಕ್ಕೆ ಚಿತ್ರ ಸುದ್ದಿಗೆ ಬಂದಿತ್ತು. ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದ ಪ್ರಿಯಾಂಕ ಕೊನೆಯಲ್ಲಿ ಕೈಕೊಟ್ಟಿದ್ದರು. ಇದು ಸಲ್ಮಾನ್ ಕೋಪಕ್ಕೂ ಕಾರಣವಾಗಿತ್ತು. ನಂತ್ರ ಕತ್ರಿನಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...