alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಅಭಿಮಾನಿಗಳ ಕೋಪಕ್ಕೆ ಗುರಿಯಾದ ಮಹೇಶ್ ಬಾಬು

ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಭರತ್ ಆನೇ ನೇನು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿಯೂ ಕಮಾಲ್ ಮಾಡ್ತಿದೆ.

ಚಿತ್ರದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ಮಹೇಶ್ ಬಾಬು ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅವರು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂನಲ್ಲಿ ಅವರು ಧನ್ಯವಾದ ಹೇಳಿದ್ದರು. ಇದಕ್ಕೆ ಕನ್ನಡ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಸುಮಾರು 100 ಸೆಂಟರ್ ಗಳಲ್ಲಿ ‘ಭರತ್ ಆನೇ ನೇನು’ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು, ಸಿನಿರಸಿಕರು ಸಿನಿಮಾ ನೋಡಿ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ, ನೀವು ಕನ್ನಡದ ಅಭಿಮಾನಿಗಳನ್ನು ಪರಿಗಣಿಸಿಲ್ಲ ಎಂದು ದೂರಿದ್ದಾರೆ.

ಪಕ್ಷಪಾತ ಮಾಡದೇ ಬೇರೆ ಭಾಷೆಗಳಲ್ಲಿ ಧನ್ಯವಾದ ಹೇಳಿರುವಂತೆ ಕನ್ನಡದಲ್ಲಿ ಧನ್ಯವಾದ ಹೇಳಬೇಕಿತ್ತು ಎಂದು ಹೇಳಲಾಗಿದೆ. ಇದನ್ನು ಗಮನಿಸಿದ ಪ್ರಿನ್ಸ್ ಮಹೇಶ್ ಬಾಬು ಕನ್ನಡದಲ್ಲಿಯೂ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...