alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಮೊದಲ ಸಿನಿಮಾ ನಾಯಕಿ ಪುತ್ರನ ಮೊದಲ ಸಿನಿಮಾಗೆ ಭಾರೀ ಜನ ಮೆಚ್ಚುಗೆ

ಸಲ್ಮಾನ್ ಖಾನ್ ಡೆಬ್ಯು ಮೂವಿ ಮೈ ನೆ ಪ್ಯಾರ್ ಕಿಯಾ ಸಿನಿಮಾ ನಿಮಗೆ ನೆನಪಿರಬೇಕಲ್ವಾ..? ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ದಿಲ್ ದಿವಾನ ಅಂತ ಹಾಡಿ ಕುಣಿದಿದ್ದು ಭಾಗ್ಯಶ್ರೀ. ಮೈ ನೆ ಪ್ಯಾರ್ ಕಿಯಾ ಸಿನಿಮಾ ಸಲ್ಮಾನ್ ಖಾನ್ಗೆ ಮಾತ್ರವಲ್ಲ. ಭಾಗ್ಯಶ್ರೀಗೆ ಕೂಡ ಬಿಗ್ ಬ್ರೇಕ್ ಕೊಟ್ಟಿತ್ತು. ಈಗ ಭಾಗ್ಯಶ್ರಿ ಪುತ್ರ ಅಭಿಮನ್ಯು ದಾಸನಿ ಬಾಲಿವುಡ್ ಪ್ರವೇಶದ ಸಿನಿಮಾ ಸಖತ್ ಸದ್ದು ಮಾಡ್ತಿದೆ.

ಅಭಿಮನ್ಯು ಅಭಿನಯದ ಡೆಬ್ಯು ಸಿನಿಮಾ ಮರ್ದ್ ಕೋ ದರ್ದ್ ನಹಿ ಹೋತಾ ಸಿನಿಮಾ ಟೊರೆಂಟೋ ಫಿಲ್ಮ್ ಫೆಸ್ಟಿವಲ್ ನಲ್ಲಿ ವೀಕ್ಷಕರ ಆಯ್ಕೆ ಪ್ರಶಸ್ತಿಗೆ ಪಾತ್ರವಾಗಿದೆ. ಮಿಡ್ನೈಟ್ ಮ್ಯಾಡ್ನೆಸ್ ಅವಾರ್ಡ್ ಕೂಡ ಪಡೆದುಕೊಂಡಿದೆ.

ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಅಂತಿದ್ದ ಅಭಿಮನ್ಯು ಆನಂತರದಲ್ಲಿ ಮನಸ್ಸು ಬದಲಿಸಿ ಆಕ್ಟಿಂಗ್ ಕೆರಿಯರ್ ನತ್ತ ಬಂದರು. ಅಭಿನಯ ಶಾಲೆಗೆ ಸೇರಿ ಸಿನಿಮಾದಲ್ಲೂ ಕಾಣಿಸಿಕೊಂಡರು. ತಮ್ಮ ಮೊದಲ ಸಿನಿಮಾ ಯಶಸ್ಸು ಬಗ್ಗೆ ಮಾತನಾಡಿದ ಅಭಿಮನ್ಯು ಶ್ರಮಕ್ಕೆ ಯಾವತ್ತಿದ್ದರು ಪ್ರತಿಫಲ ಸಿಕ್ಕೇ ಸಿಗುತ್ತದೆ ಅಂತಾರೆ.

ಸಿನಿಮಾದ ಗೆಲುವು ಮತ್ತಷ್ಟು ಉತ್ತಮ ಸಿನಿಮಾಗಳನ್ನು ಮಾಡೋದಕ್ಕೆ ಸ್ಫೂರ್ತಿ ನೀಡಿವೆಯಂತೆ. ಈಗಾಗ್ಲೇ ಬಿಗ್ ಬ್ಯಾನರ್ ಗಳಿಂದ ಹೊಸ ಸಿನಿಮಾಗೆ ಆಫರ್ ಗಳು ಅಭಿಮನ್ಯುವಿಗೆ ಬರ್ತಿವೆಯಂತೆ. ಆದ್ರೆ ವಾಸನ್ ಬಾಲಾ ಅವರ ಸಿನಿಮಾವನ್ನು ಅಭಿಮನ್ಯು ಈಗಾಗ್ಲೇ ಒಪ್ಪಿಕೊಂಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...