alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ಕಮಲ್ ಹಾಸನ್ ಮಾಡಿದ್ದೇನು ಗೊತ್ತಾ..?

ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನಟರಿಗೂ ಅಷ್ಟೇ, ಅಭಿಮಾನಿಗಳೆಂದರೆ ಅಚ್ಚುಮೆಚ್ಚು. ಆದರೆ, ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ತಿರುಗಿ ನಟರು ಸಿಟ್ಟಾದ ಅನೇಕ ಪ್ರಸಂಗ ನಡೆದಿವೆ.

ಅಂತಹುದೇ ಒಂದು ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ಖ್ಯಾತ ನಟ ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ಅವರು, ಬೆಂಗಳೂರಿನ ಅಂಗಡಿಯೊಂದಕ್ಕೆ ಹೋಗಿ ವಾಪಸ್ ತೆರಳುವಾಗ, ಅಭಿಮಾನಿಗಳು ಮುತ್ತಿಕೊಂಡಿದ್ದಾರೆ.

ಈ ವೇಳೆ ಅಭಿಮಾನಿಯೊಬ್ಬ ಕಮಲ್ ಹತ್ತಿರಕ್ಕೆ ಹೋಗಲು ಎಲ್ಲರನ್ನು ತಳ್ಳಿ ಮುಂದೆ ಹೋಗಿದ್ದು, ಆತನನ್ನು ರಮೇಶ್ ಅರವಿಂದ್ ದೂರ ನೂಕಿದ್ದಾರೆ.

ಮತ್ತೆ ತಮ್ಮ ಬಳಿಗೆ ನುಗ್ಗಿ ಬಂದ ಆತನಿಗೆ ಕಮಲ್ ಕೆನ್ನೆಗೆ ಬಾರಿಸಿದ್ದಾರೆ. ಅಭಿಮಾನಿಗಳ ನೂಕುನುಗ್ಗಲಿನ ನಡುವೆಯೇ ಕಷ್ಟಪಟ್ಟು ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...