alex Certify
ಕನ್ನಡ ದುನಿಯಾ       Mobile App
       

Kannada Duniya

“ಬೆಲ್ ಬಾಟಂ” ಜೊತೆ ”ಸೀತಾರಾಮ ಕಲ್ಯಾಣ” ಕ್ಲಾಶ್..?

ಚಿತ್ರರಂಗದಲ್ಲಿ ಎರಡು ದೊಡ್ಡ ಬಜೆಟ್‍ ನ ಅಥವಾ ದೊಡ್ಡ ನಿರೀಕ್ಷೆಯ ಸಿನಿಮಾಗಳ ರಿಲೀಸ್ ಕ್ಲಾಶ್ ಆಗುವುದು ಹೊಸತೇನಲ್ಲ. ಅಂಥದ್ದೊಂದು ಕ್ಲಾಶ್ “ಸೀತಾರಾಮ ಕಲ್ಯಾಣ” ಮತ್ತು “ಬೆಲ್‍ ಬಾಟಂ” ಬಿಡುಗಡೆಯಲ್ಲೂ ಆಗಲಿದೆಯೇ ಎಂಬ ಅನುಮಾನವೊಂದು ಮೂಡಿದೆ.

ಹೌದು…..ಬೆಲ್‍ ಬಾಟಮ್ ಬಿಡುಗಡೆ ಜ. 18 ರಂದು ಎಂದು ಈಗಾಗಲೇ ನಿರ್ಧರಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಸೋಮವಾರದವರೆಗೆ ರಜೆಯಲ್ಲಿರುವುದರಿಂದ ಅಂದುಕೊಂಡ ಸಮಯಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದಂತಾಗಿದೆ. ಹಾಗಾಗಿ ಸಿನಿಮಾ ಬಿಡುಗಡೆ ಬಹುತೇಕ ಜ. 25 ರಂದೇ ಅಗಲಿದೆ ಎಂಬುದು ಚಿತ್ರತಂಡದವರ ಲೆಕ್ಕಾಚಾರ.

ಮತ್ತೊಂದೆಡೆ ನಿಖಿಲ್ ಕುಮಾರ್-ರಚಿತಾರಾಮ್ ನಟಿಸಿರುವ ಸೀತಾರಾಮ ಕಲ್ಯಾಣ ಅಂದೇ ಬಿಡುಗಡೆ ಆಗಲಿರುವುದರಿಂದ ಎರಡೂ ಸಿನಿಮಾಗಳ ಮಧ್ಯೆ ಕ್ಲಾಶ್ ಆಗಬಹುದು ಎನ್ನುತ್ತಾರೆ ಗಾಂಧಿನಗರದ ಕೆಲವರು. ಇನ್ನೊಂದೆಡೆ ಎರಡೂ ವಿಭಿನ್ನ ಸಿನಿಮಾಗಳಾದ್ದರಿಂದ ಅಂಥ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...