alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೂಕ್ ಪುತ್ರಿಯ ಬಾಲಿವುಡ್ ಎಂಟ್ರಿಗೆ ನಡೆದಿದೆ ಭರ್ಜರಿ ತಯಾರಿ

ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಪುತ್ರಿ ಸುಹಾನ ವೆನಿಸ್ ನಲ್ಲಿದ್ದಾರೆ. ಭರ್ಜರಿಯಾಗಿ ಫಾರಿನ್ ಟ್ರಿಪ್ ಮಾಡ್ತಿರೋ ಸುಹಾನಾ ಖಾನ್ ಅದರ ನಡುವೆಯೇ ಭವಿಷ್ಯದ ಬಾಲಿವುಡ್ ನಲ್ಲಿ ಸ್ಟಾರ್ ಹಿರೋಯಿನ್ ಆಗೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಫಾರಿನ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರೋ ಸುಹಾನಾ ಈಗ ಪ್ರಖ್ಯಾತ ವೋಗ್ ಮ್ಯಾಗಜಿನ್ ನ ಕವರ್ ಫೋಟೋಗಾಗಿ ವಿಡಿಯೋ ಚಿತ್ರೀಕರಣಕ್ಕೆ ಫೋಸ್ ನೀಡಿದ್ದಾರೆ.

ಕವರ್ ಪೇಜ್ ಗಾಗಿ ನಡೆದ ಚಿತ್ರೀಕರಣವನ್ನು ಸುಹಾನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರಂತೆ. ಅದರಲ್ಲೂ ಡಾನ್ಸಿಂಗ್ ಶಾಟ್ಸ್ ಗಳಲ್ಲಿ ಸುಹಾನ ಅತಿ ಉತ್ಸಾಹದಿಂದ ಹೆಜ್ಜೆ ಹಾಕಿದ್ದು, ಡ್ಯಾನ್ಸ್ ಅಂದ್ರೆ ತನಗೆ ತುಂಬಾನೆ ಅಚ್ಚುಮೆಚ್ಚು ಎಂದಿದ್ದಾರೆ.

ಸುಹಾನ ಬಾಲಿವುಡ್ ಡೆಬ್ಯುಗಾಗಿ ಶಾರುಕ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಈಗಾಗ್ಲೇ ತಯಾರಿ ಶುರು ಮಾಡಿದ್ದಾರಂತೆ. ಕರಣ್ ಜೋಹರ್ ಅಥವಾ ಸಂಜಯ್ ಲೀಲಾ ಬನ್ಸಾಲಿಯವರ ಫಿಲ್ಮೀ ಕ್ಯಾಂಪ್ ಸುಹಾನಾ ಡೆಬ್ಯುಗೆ ವೇದಿಕೆಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಅಷ್ಟೇ ಅಲ್ಲದೆ ಇತರೆ ನಿರ್ದೇಶಕರ ಗರಡಿಯಿಂದಲೂ ಮಗಳನ್ನ ಬಾಲಿವುಡ್ ನಲ್ಲಿ ಲಾಂಚ್ ಮಾಡೋದಕ್ಕೆ ಖಾನ್ ದಂಪತಿ ಯೋಚಿಸುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...