alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ಗುಡಿ ಡೇಸ್ ಇನ್ ಕನ್ನಡ: ಮತ್ತೆ ಶುರುವಾಗುತ್ತಾ ಡಬ್ಬಿಂಗ್ ವಿವಾದ…?

ಶಂಕರ್ ನಾಗ್ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ’ಮಾಲ್ಗುಡಿ ಡೇಸ್’ ಯಾರಿಗೆ ತಾನೆ ಮರೆಯಲು ಸಾಧ್ಯ. ಕ್ರಿಯಾಶೀಲತೆಗೆ ಇನ್ನೊಂದು ಹೆಸರೆಂಬಂತಿರುವ ಈ ಅದ್ಬುತ ಧಾರಾವಾಹಿ ಕನ್ನಡದಲ್ಲಿ ಬಂದರೆ ಹೇಗಿರುತ್ತೆ…ಆಲೋಚನೆಯೇ ಸುಂದರ ಅಲ್ವಾ…? ಇಂತದ್ದೊಂದು ಅಲೋಚನೆಯನ್ನು ಹುಟ್ಟುಹಾಕಿದೆ ಬನವಾಸಿ ಬಳಗ ಎಂಬ ಕನ್ನಡ ಪರ ಸಂಘಟನೆ. ಈ ಸಂಘಟನೆ ಟ್ವಿಟರ್​ ಹಾಗೂ ಫೇಸ್​ಬುಕ್​ನಲ್ಲಿ #MalgudiDaysInKannada ಎಂಬ ಅಭಿಯಾನವನ್ನು ಕೂಡ ಆರಂಭಿಸಿದೆ.

ಮಾಲ್ಗುಡಿ ಡೇಸ್ ಶಂಕರ್​ನಾಗ್​ ಅವರು ಹಿಂದಿ ಭಾಷೆಯಲ್ಲಿ ನಿರ್ದೇಶನ ಮಾಡಿರುವ ಧಾರಾವಾಹಿ. ಇದನ್ನು ಇಂಗ್ಲೀಷ್​, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹತೇಕ ಭಾಷೆಗಳಿಗೆ ಡಬ್​ ಮಾಡಲಾಗಿದೆ. ಆದರೆ ಕನ್ನಡದಲ್ಲಿ ಮಾತ್ರ ಈವರೆಗೆ ಈ ಪ್ರಯತ್ನ ನಡೆದಿಲ್ಲ. ಹಾಗಾಗಿ ಕನ್ನಡದವರೇ ನಿರ್ದೇಶಿಸಿ, ನಿರ್ಮಿಸಿ, ಅಭಿನಯಿಸಿರುವ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಕ್ಕೆ ಡಬ್​ ಮಾಡಿ, ಪ್ರಸಾರ ಮಾಡಬೇಕೆಂಬುದು ಬನವಾಸಿ ಬಳಗದ ಒತ್ತಾಸೆ.

ಈ ಮೂಲಕ ಮತ್ತೆ ಕನ್ನಡದಲ್ಲಿ ಡಬ್ಬಿಂಗ್ ವಿವಾದದ ಕಿಡಿ ಸಣ್ಣಗೆ ಹೊತ್ತಿಕೊಂಡಿದೆ. ಕನ್ನಡದಲ್ಲಿ ಡಬ್ಬಿಂಗ್ ಪರವಾಗಿ ನಡೆದ ಹೋರಾಟದಲ್ಲಿ ತೊಡಗಿಕೊಂಡಿದ್ದ ಬನವಾಸಿ ಬಳಗದ ಸದಸ್ಯರು ಇದೀಗ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಬೇಕೆಂಬ ಅಭಿಯಾನ ಕೈಗೊಂಡಿದ್ದಾರೆ. ಆದರೆ ಡಬ್ಬಿಂಗ್ ವಿರೋಧಿಸುವ ಚಿತ್ರರಂಗದ ಹಲವರು, ಮಾಲ್ಗುಡಿ ಡೇಸ್ ನ್ನು ಕನ್ನಡಕ್ಕೆ ಡಬ್​ ಮಾಡಬಾರದು. ಇದರಿಂದ ಡಬ್ಬಿಂಗ್​ ಬೇಡವೆಂದು ನಡೆಸಿಕೊಂಡು ಬಂದಿರುವ ಹೋರಾಟದ ಹಾದಿಯೇ ತಪ್ಪುತ್ತದೆ. ಹಾಗಾಗಿ ಮಾಲ್ಗುಡಿ ಡೇಸ್ ನ್ನು ಯಾರಾದರೂ ನಮ್ಮವರು ಹೊಸದಾಗಿ ಕನ್ನಡದಲ್ಲೇ ನಿರ್ಮಿಸಬಹುದು ಎಂಬ ಸಲಹೆ ನೀಡುತ್ತಾರೆ.

ಒಟ್ಟಿನಲ್ಲಿ ಮತ್ತೆ ಸಣ್ಣದಾಗಿ ಹೊತ್ತಿಕೊಂಡಿರುವ ಈ ಡಬ್ಬಿಂಗ್ ಕಿಡಿ ಹೊರತಾಗಿಯೂ ಮಾಲ್ಗುಡಿ ಡೇಸ್ ಕನ್ನಡದಲ್ಲಿ ಮೂಡಿ ಬರತ್ತಾ ಎಂಬುದನ್ನು ಕಾದುನೊಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...