alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಟ್ಟಪ್ಪ’ ಸತ್ಯರಾಜ್ ಹೇಳಿಕೆಗೆ ರಾಜಮೌಳಿ ಹೇಳಿದ್ದೇನು..?

rajamouli_630x450ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ಈ ಮಧ್ಯೆ ಚಿತ್ರದಲ್ಲಿ ‘ಕಟ್ಟಪ್ಪ’ ಪಾತ್ರವನ್ನು ನಿರ್ವಹಿಸಿರುವ ಸತ್ಯರಾಜ್, ಕಾವೇರಿ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯೊಂದು ಕಿಚ್ಚೆಬ್ಬಿಸಿದೆ. ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಏಪ್ರಿಲ್ 28 ರಂದು ವಿವಿಧ ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಮಧ್ಯೆ ಕನ್ನಡಿಗರಿಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ರಾಜಮೌಳಿ, ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರದಲ್ಲಿ ಸತ್ಯರಾಜ್ ಒಬ್ಬ ಪಾತ್ರಧಾರಿಯಷ್ಟೇ. ಒಂಭತ್ತು ವರ್ಷಗಳ ಹಿಂದೆ ಅವರು ನೀಡಿರುವ ಹೇಳಿಕೆಯನ್ನಿಟ್ಟುಕೊಂಡು ಈಗ ವಿರೋಧ ಮಾಡುತ್ತಿರುವುದು ಸರಿಯಲ್ಲ. ಈ ಒಂಭತ್ತು ವರ್ಷದ ಅವಧಿಯಲ್ಲಿ ಸತ್ಯರಾಜ್ ನಟಿಸಿರುವ ಆನೇಕ ಚಿತ್ರಗಳು ಬಿಡುಗಡೆಯಾಗಿವೆ. ‘ಬಾಹುಬಲಿ’ ಚಿತ್ರವನ್ನು ಬೆಂಬಲಿಸಿದಂತೆ ‘ಬಾಹುಬಲಿ-ದಿ ಕನ್ ಕ್ಲೂಸನ್’ ಚಿತ್ರವನ್ನೂ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆಯೇ ಸತ್ಯರಾಜ್ ರನ್ನು ಸಂಪರ್ಕಿಸಿದ್ದೇವೆ. ಇದಷ್ಟೇ ಮಾಡಲು ತಮಗೆ ಸಾಧ್ಯವಾಗಿದ್ದು, ಸತ್ಯರಾಜ್ ನೀಡಿದ ಹೇಳಿಕೆಗಾಗಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರೆ ನಿರ್ಮಾಪಕರು ಇತರೆ ಕಲಾವಿದರಿಗೆ ಅನ್ಯಾಯವಾಗುತ್ತದೆ. ಸತ್ಯರಾಜ್ ನೀಡಿರುವ ಹೇಳಿಕೆಗೂ ‘ಬಾಹುಬಲಿ’ ಚಿತ್ರತಂಡಕ್ಕೂ ಯಾವುದೇ ಸಂಬಂಧವಿಲ್ಲದ ಕಾರಣ ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸಿ ಎಂದು ರಾಜಮೌಳಿ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...