alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ರಿಯಲ್ ಲೈಫ್ ಗೆ ಹುಡುಗಿಯ ಎಂಟ್ರಿ..!

prabhas

ಬಾಹುಬಲಿ ನಟ ಪ್ರಭಾಸ್ ಈ ವರ್ಷ ಮದುವೆಯಾಗ್ತಿದ್ದಾರೆಂಬ ಸುದ್ದಿ ಎಲ್ಲೆಡೆ ಹರಡಿತ್ತು. ಪ್ರಭಾಸ್ ಕುಟುಂಬದವರು ಒಳ್ಳೆಯ ಹುಡುಗಿ ಹುಟುಕಾಟದಲ್ಲಿದ್ದಾರೆನ್ನಲಾಗ್ತಾ ಇತ್ತು. ಪ್ರಭಾಸ್ ಕುಟುಂಬ ಅವರ ಮದುವೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದನ್ನು ಕೇಳಿ, ಪ್ರಭಾಸ್ ಅಭಿಮಾನಿಗಳು ಎದ್ದು ಕುಳಿತಿದ್ದರು. ಪ್ರಭಾಸ್ ಕೈ ಹಿಡಿಯುವ ಕನಸು ಕಾಣ್ತಾ ಇದ್ದರು ಕೆಲ ಹುಡುಗಿಯರು. ಆದ್ರೆ ಅವರಿಗೊಂದು ಬೇಸರದ ಸಂಗತಿ.

‘ಬಾಹುಬಲಿ 2’ ಬಿಡುಗಡೆ ಶೂಟಿಂಗ್ ಪೂರ್ಣಗೊಂಡ ನಂತರ ಪ್ರಭಾಸ್ ವೈವಾಹಿಕ ಬಂಧನಕ್ಕೊಳಗಾಗಲಿದ್ದಾರಂತೆ. ಈಗಾಗಲೇ ಪ್ರಭಾಸ್ ಕೈ ಹಿಡಿಯುವ ಹುಡುಗಿ ಸಿಕ್ಕಾಗಿದೆಯಂತೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ವೈರಲ್ ಆಗಿದೆ. ಆಕೆಯೇ ಪ್ರಭಾಸ್ ಜೊತೆ ಸಪ್ತಪದಿ ತುಳಿಯಲಿದ್ದಾಳೆನ್ನಲಾಗ್ತಾ ಇದೆ.

ಈ ಹುಡುಗಿ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನವಳು ಎನ್ನಲಾಗ್ತಾ ಇದೆ. ಆಕೆ ಬಿಟೆಕ್ ಅಭ್ಯಾಸ ಮಾಡ್ತಾ ಇದ್ದು, ಈ ವರ್ಷ ಪೂರ್ಣಗೊಳ್ಳಲಿದೆ. ಆದ್ರೆ ಇದನ್ನು ಪ್ರಭಾಸ್ ನಿಕಟವರ್ತಿಗಳು ತಳ್ಳಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರುವ ಫೋಟೋ ನಕಲಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...