alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲೀಸ್ ಗೂ ಮೊದಲೇ ‘ಬಾಹುಬಲಿ’ ದಾಖಲೆ ಮುರಿದ ‘ಗಬ್ಬರ್ ಸಿಂಗ್’

gabber

ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಸರ್ದಾರ್ ಗಬ್ಬರ್ ಸಿಂಗ್’ ಬಿಡುಗಡೆಗೂ ಮೊದಲೇ ಹೈಪ್ ಕ್ರಿಯೇಟ್ ಮಾಡಿದ್ದು, ಬರೋಬ್ಬರಿ 107 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್’ ರಿಮೇಕ್ ‘ಗಬ್ಬರ್ ಸಿಂಗ್’ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಭರ್ಜರಿ ಯಶಸ್ಸು ಕಂಡಿದ್ದರು.

ಇದೀಗ ‘ಸರ್ದಾರ್ ಗಬ್ಬರ್ ಸಿಂಗ್’ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಪವನ್ ಕಲ್ಯಾಣ್ ಟಾಲಿವುಡ್ ಇತಿಹಾಸದಲ್ಲಿಯೇ ದುಬಾರಿ ಫಂಕ್ಷನ್ ಮಾಡುತ್ತಿದ್ದಾರೆ. ತಿರುಪತಿಯಲ್ಲಿ 1 ಕೋಟಿ ರೂ. ಖರ್ಚು ಮಾಡಿ ‘ಬಾಹುಬಲಿ’ ಆಡಿಯೋ ರಿಲೀಸ್ ಮಾಡಲಾಗಿತ್ತು. ಈಗ ಸರ್ದಾರ್ ಗಬ್ಬರ್ ಸಿಂಗ್ ಆಡಿಯೋ ರಿಲೀಸ್ ಗೆ 1.25 ಕೋಟಿ ರೂ ವೆಚ್ಛದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್ ನ ಗಚ್ಚಿಬೌಲಿ ಸ್ಟೇಡಿಯಂ ಬುಕ್‍ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿರಂಜೀವಿ, ನಾಗೇಂದ್ರಬಾಬು, ರಾಮ್ ಚರಣ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರ ವಿತರಣೆ, ಸೆಟ್ ಲೈಟ್ ಹಕ್ಕುಗಳಿಂದ ಈಗಾಗಲೇ 107 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಪವನ್ ಕಲ್ಯಾಣ್ ಅವರೊಂದಿಗೆ ಸಮಂತಾ, ಕಾಜೋಲ್ ಅಗರ್ ವಾಲ್ ಮೊದಲಾದವರು ನಟಿಸಿರುವ ಚಿತ್ರವನ್ನು ಕೆ.ಎಸ್. ರವೀಂದ್ರ ನಿರ್ದೇಶನ ಮಾಡಿದ್ದಾರೆ. ಹೀಗೆ ದುಬಾರಿ ಆಡಿಯೋ ಲಾಂಚ್ ಫಂಕ್ಷನ್ ಮಾಡುವ ಮೂಲಕ ರಿಲೀಸ್ ಆಗುವ ಮೊದಲೇ ‘ಬಾಹುಬಲಿ’ ದಾಖಲೆಯನ್ನು ಗಬ್ಬರ್ ಸಿಂಗ್ ಮುರಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...