alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಮನೆಯವರ ವಿರುದ್ಧ ದೂರು ದಾಖಲಿಸಿದ ಫ್ಯಾಷನ್ ಡಿಸೈನರ್

ಮುಂಬೈನ ಖ್ಯಾತ ಫ್ಯಾಷನ್ ಡಿಸೈನರ್ ಬಬಿತಾ ಮಲ್ಕಾನಿ ತನ್ನ ಪತಿ ಸೇರಿದಂತೆ ಆತನ ಸೋದರ, ಸೋದರಿಯರು ಮತ್ತು ಅತ್ತೆಯ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡ್ತಿದ್ದಾರೆ ಅಂತ ದೂರು ದಾಖಲಿಸಿದ್ದಾರೆ. 26 ವರ್ಷಗಳ ದಾಂಪತ್ಯದಲ್ಲಿ ತುಂಬಾ ನೊಂದಿರೋದಾಗಿ ಬಬಿತಾ ದೂರಿನಲ್ಲಿ ತಿಳಿಸಿದ್ದಾರೆ.

1992 ರಲ್ಲಿ ಬಬಿತಾ ಮತ್ತು ಪ್ರವೀಣ್ ಮಲ್ಕಾನಿ ಮದುವೆಯಾಗಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇತ್ತೀಚೆಗೆ ಗಂಡ ಮತ್ತವರ ಸೋದರ- ಸೋದರಿಯರು ಮತ್ತು 86 ವರ್ಷದ ಗಂಡನ ತಾಯಿ, ಮನೆ ತೊರೆಯುವಂತೆ ತನಗೆ ಒತ್ತಾಯ ಮಾಡ್ತಿದ್ದಾರೆ. ಜುಹುನಲ್ಲಿರುವ ಮನೆಯನ್ನ ಬಿಟ್ಟು ಹೋಗುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡ್ತಿದ್ದಾರೆ ಅಂತ ಬಬಿತಾ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಟೆಕ್ಸ್ಟ್ ಮೆಸೇಜ್ ಮತ್ತು ವಾಟ್ಸಾಪ್ ಸಂದೇಶದ ಸಾಕ್ಷ್ಯಗಳನ್ನ ಪೊಲೀಸರಿಗೆ ನೀಡಿದ್ದಾರೆ.

ಮಾರ್ಚ್ ನಿಂದಲೂ ಬಬಿತಾ ಗಂಡನ ಮನೆಯವರ ಕಿರುಕುಳವನ್ನ ಸಹಿಸಿಕೊಂಡೇ ಬರ್ತಿದ್ದಾರಂತೆ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಕಾರಣದಿಂದ ಮುಂಬೈನಿಂದ ಹೊರಗಿದ್ದಾರೆ. ಜುಹುನಲ್ಲಿರುವ ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ಬಬಿತಾ ಕುಟುಂಬ ವಾಸವಿದೆ. ಮೊದಲ ಮತ್ತು ಎರಡನೆಯ ಮಹಡಿಯಲ್ಲಿ ಗಂಡನ ಮನೆಯವರು ವಾಸವಿದ್ದಾರೆ. ಈಗ ತನಗೆ ಮನೆ ತೊರೆಯುವಂತೆ ಹಿಂಸೆ ನೀಡುತ್ತಿದ್ದಾರೆ ಅಂತ ಬಬಿತಾ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...