alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಗೆ ಎಂಟ್ರಿ ಪಡೆದ ಯೋಗ ಗುರು

ramdev

ಯೋಗ ಗುರು ಬಾಬಾ ರಾಮ್ದೇವ್ ಬಾಲಿವುಡ್ ಗೆ ಎಂಟ್ರಿಯಾಗಿದ್ದಾರೆ, ಯೆ ಹೇ ಇಂಡಿಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬರಲಿದ್ದಾರೆ ರಾಮ್ದೇವ್. ಈ ಚಿತ್ರದ ಸೈಯಾನ್ ಸೈಯಾನ್ ಹಾಡಿನಲ್ಲಿ ಬಾಬಾ ರಾಮ್ದೇವ್ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಲೋಮ್ ಹರ್ಶ್ ನಿರ್ದೇಶಿಸಿದ್ದು, ಸಂದೀಪ್ ಚೌಧರಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಆಗಸ್ಟ್ 18ರಂದು ಚಿತ್ರ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಬಾಬಾ ರಾಮ್ದೇವ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಅಭಿವೃದ್ಧಿ ಬಗ್ಗೆಯೂ ಮಾತನಾಡಿದ್ದಾರೆ.

ಭಾರತದಲ್ಲಿ ವೇದದ ಆವಿಷ್ಕಾರವಾಯ್ತು. ಭಾರತದ ಬಗ್ಗೆ ಅನೇಕರಿಗೆ ಇನ್ನೂ ತಪ್ಪು ಕಲ್ಪನೆಯಿದೆ. ಭಾರತ ಹಿಂದುಳಿದ ದೇಶವಲ್ಲ. ಮುಂದುವರೆದ ದೇಶ. ಭಾರತಕ್ಕೆ ಇಡೀ ವಿಶ್ವವನ್ನು ನಿರ್ಮಾಣ ಮಾಡುವ ಕ್ಷಮತೆಯಿದೆ. ಯೆ ಹೇ ಇಂಡಿಯಾದಲ್ಲಿ ಬದಲಾದ ಭಾರತವನ್ನು ನೀವು ನೋಡಬಹುದು. ನಾನು ತುಂಬಾ ಯೋಚನೆ ಮಾಡಿ ನಂತ್ರ ಚಿತ್ರಕ್ಕೆ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ. ದೇಶದ ಪ್ರತಿಯೊಬ್ಬ ವ್ಯಕ್ತಿ ಈ ಚಿತ್ರವನ್ನು ಮೆಚ್ಚುತ್ತಾನೆಂಬ ಭರವಸೆಯಿದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ. ಇದೇ ವೇಳೆ ಚಿತ್ರದ ನಿರ್ದೇಶಕರು ಬಾಬಾ ರಾಮ್ದೇವ್ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...