alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ….

ಪ್ರಭಾಸ್ ಗೆ ತಾನೊಬ್ಬ ನಟ ಆಗಬಹುದು ಅನ್ನೋ ಕಲ್ಪನೆ ಕೂಡ ಇರಲಿಲ್ಲ. ಹಾಸ್ಪಿಟಾಲಿಟಿ ಸೆಕ್ಟರ್ ನಲ್ಲಿ ವೃತ್ತಿ ಮುಂದುವರಿಸಬೇಕು ಅಂತಾ ಅವರು ಅಂದುಕೊಂಡಿದ್ರು. ಆದ್ರೆ ಈಗ ಪ್ರಭಾಸ್ ದೇಶದ ಅತ್ಯಂತ ಯಶಸ್ವಿ ಸಿನೆಮಾ ನಟ. ಆದ್ರೆ ಆ ಹಮ್ಮು-ಬಿಮ್ಮು ಅವರಲ್ಲಿಲ್ಲ.

ಕೋಟ್ಯಂತರ ಜನರು ಬಂದು ತಮ್ಮ ಸಿನೆಮಾ ನೋಡಬೇಕು ಅನ್ನೋದು ಅವರ ಆಸೆ. ಆದ್ರೆ ನೇರವಾಗಿ ಅಷ್ಟೊಂದು ಜನರನ್ನು ಫೇಸ್ ಮಾಡೋದು ಕಷ್ಟವಂತೆ. ಆ ಸ್ಟಾರ್ಡಮ್ ಅನ್ನೋದನ್ನು ಮೆಂಟೇನ್ ಮಾಡಲು ಸಾಧ್ಯವಾಗ್ತಿಲ್ಲ. ಈಗಲೂ ಸಂದರ್ಶನಕ್ಕೆ ಹೋದಾಗಲೆಲ್ಲ ನಾಚಿಕೊಳ್ತೇನೆ ಎನ್ನುತ್ತಾರೆ ಪ್ರಭಾಸ್.

ಪ್ರಭಾಸ್ ಚಿತ್ರರಂಗಕ್ಕೆ ಬಂದು 12-14 ವರ್ಷಗಳೇ ಕಳೆದಿವೆ. ಆದ್ರೆ ತಾನೊಬ್ಬ ದೊಡ್ಡ ಸ್ಟಾರ್ ಅನ್ನೋ ಅಹಂ ಅವರಲ್ಲಿಲ್ಲ. ಅಭಿಮಾನಿಗಳಿಗಿರೋ ಒಂದೇ ಬೇಸರ ಅಂದ್ರೆ ತಮ್ಮ ನೆಚ್ಚಿನ ಹೀರೋ ಹೆಚ್ಚಾಗಿ ಜನರೊಂದಿಗೆ ಬೆರೆಯುತ್ತಿಲ್ಲ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೋದು.

ಈ ನಿಟ್ಟಿನಲ್ಲಿ ಕೂಡ ಪ್ರಭಾಸ್ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದಾರಂತೆ. ಪ್ರಭಾಸ್ ತಂದೆ ಉಪ್ಪಲಪತಿ ಸೂರ್ಯ ನಾರಾಯಣ ರಾಜು ತೆಲುಗಿನ ಪ್ರಸಿದ್ಧ ನಿರ್ಮಾಪಕರು. ಚಿಕ್ಕಪ್ಪ ಕೃಷ್ಣಂ ರಾಜು ಉಪ್ಪಲಪತಿ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಹಾಗಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುವಂತೆ ಕುಟುಂಬಸ್ಥರೆಲ್ಲ ಸಲಹೆ ನೀಡಿದ್ದರು.

ಆದ್ರೆ ಪ್ರಭಾಸ್ ನಿರಾಕರಿಸಿದ್ದರಂತೆ. ಅಷ್ಟೆಲ್ಲಾ ಜನ, ಲೈಟ್ಸ್, ಕ್ಯಾಮರಾ ಮುಂದೆ ನಟಿಸಲು ಸಾಧ್ಯವೇ ಇಲ್ಲ ಅಂತಾ ಪ್ರಭಾಸ್ ಗೆ ಅನಿಸಿತ್ತು. ನಾನು ಸ್ವಲ್ಪ ಸೋಮಾರಿ, ಹಾಗಾಗಿ ಹೋಟೆಲ್ ಬ್ಯಸಿನೆಸ್ ಮಾಡೋಣ ಎಂದುಕೊಂಡಿದ್ದೆ ಅಂತಾ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಚಿಕ್ಕಪ್ಪನ ಸಿನೆಮಾಗಳನ್ನು ನೋಡಿದ ಬಳಿಕ ಪ್ರಭಾಸ್ ಗೆ ತಾವೂ ನಟನಾಗಬೇಕು ಎಂಬ ಕಲ್ಪನೆ ಮೊಳಕೆಯೊಡೆದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...