alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಆಕ್ಷನ್ ಸೀನ್ ಗಾಗಿ ಖರ್ಚು ಮಾಡಲಾಗ್ತಿದೆ 90 ಕೋಟಿ

‘ಬಾಹುಬಲಿ’ ನಂತರ ನಟ ಪ್ರಭಾಸ್ ನಟಿಸುತ್ತಿರುವ ಚಿತ್ರ ‘ಸಾಹೂ’ ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಸುಜಿತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ.

ಸದ್ಯ ಚಿತ್ರತಂಡ ದುಬೈನಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಚೇಸಿಂಗ್, ಆಕ್ಷನ್ ಸೀನ್ ಗಳ ಶೂಟಿಂಗ್ ನಡೆಯುತ್ತಿದೆ. ಅದಕ್ಕೆಂದೇ ಚಿತ್ರತಂಡ ಚಿತ್ರದ ಮೂರನೇ ಒಂದು ಭಾಗದಲ್ಲಿ ಬಜೆಟ್ ಖಾಲಿ ಮಾಡುತ್ತಿದೆ. ಇಲ್ಲಿ ಶೂಟಿಂಗ್ ಗೆ ಬರೋಬ್ಬರಿ 90 ಕೋಟಿ ರೂ. ವೆಚ್ಚ ಮಾಡುತ್ತಿದೆ.

ಇತ್ತೀಚಿಗಷ್ಟೇ ಅಬುಧಾಬಿಯಲ್ಲಿ ನಡೆಯುತ್ತಿರುವ ಶೂಟಿಂಗ್ ವೇಳೆ ಚೇಸಿಂಗ್ ದೃಶ್ಯದಲ್ಲಿ ಬೈಕ್ ಮೇಲೆ ಕುಳಿತಿರುವ ಪ್ರಭಾಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚಿತ್ರತಂಡದ ಜೊತೆಗೆ ಹಾಲಿವುಡ್ ಆ್ಯಕ್ಷನ್ ಕೋರಿಯೋಗ್ರಾಫರ್ ಕೆನ್ನಿ ಬೇಟ್ಸ್ ಹಾಗೂ ಉಳಿದ ಆ್ಯಕ್ಷನ್ ನಿರ್ದೇಶಕರೂ ಇದ್ದಾರೆ. ಇನ್ನೂ ಒಂದು ತಿಂಗಳು ದುಬೈನಲ್ಲಿಯೇ ಚಿತ್ರೀಕರಣ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...