alex Certify
ಕನ್ನಡ ದುನಿಯಾ       Mobile App
       

Kannada Duniya

‘ಇಂಡಿಯನ್ ಐಡಲ್’ ಗೆದ್ದ ‘ಬಾಹುಬಲಿ’ ಗಾಯಕ

revanth

ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ನ 9ನೇ ಆವೃತ್ತಿ ಮುಕ್ತಾಯವಾಗಿದೆ. ಈ ಬಾರಿ ಹೈದ್ರಾಬಾದ್ ಮೂಲದ ಗಾಯಕ ಎಲ್.ವಿ.ರೇವಂತ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರೇವಂತ್ ಈಗಾಗ್ಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಯುವ ಪ್ರತಿಭೆ. ‘ಬಾಹುಬಲಿ’ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಬಾಲಿವುಡ್ ನಲ್ಲೂ ಹಾಡುವ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆಯಿಂದ ರೇವಂತ್ ಇಂಡಿಯನ್ ಐಡಲ್ ನಲ್ಲಿ ಸ್ಪರ್ಧಿಸಿದ್ದರು. ಆರಂಭದಿಂದ್ಲೂ ರೇವಂತ್ ಕಂಠಸಿರಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ರು. ಹಿಂದಿ ಭಾಷೆ ಗೊತ್ತಿಲ್ಲದೇ ಇದ್ರೂ ಬಾಲಿವುಡ್ ಹಾಡುಗಳನ್ನು ರೇವಂತ್ ಅದ್ಭುತವಾಗಿ ಹಾಡುತ್ತಾರೆ. ಹೈದ್ರಾಬಾದ್ ನ ರೋಹಿತ್ ಹಾಗೂ ಪಂಜಾಬ್ ನ ಖುದಾ ಬಕ್ಷ್ ಕೂಡ ಫೈನಲ್ ತಲುಪಿದ್ದರು.

ಫೈನಲ್ ಎಪಿಸೋಡ್ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ವಿಶೇಷ. ಸಚಿನ್ ಕೂಡ ಸೋನು ನಿಗಮ್ ರೊಂದಿಗೆ ‘ಕ್ರಿಕೆಟ್ ವಾಲಿ ಬೀಟ್’ ಎಂಬ ಹಾಡನ್ನು ಹಾಡಿದ್ದಾರೆ. ಇನ್ನು ಇಂಡಿಯನ್ ಐಡಲ್ ಟ್ರೋಫಿ ಗೆದ್ದಿರುವ ರೇವಂತ್ ಗೆ 25 ಲಕ್ಷ ನಗದು ಬಹುಮಾನ ಹಾಗೂ ಯೂನಿವರ್ಸಲ್ ಮ್ಯೂಸಿಕ್ ಜೊತೆಗಿನ ಕಾಂಟ್ರಾಕ್ಟ್ ಕೂಡ ದೊರೆತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...