alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಪ್ರಭಾಸ್ ಗೆ ಕಾಡ್ತಿದೆ ಈ ಭಯ

ಬಾಹುಬಲಿ ನಂತ್ರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ದಕ್ಷಿಣ ಭಾರತದಲ್ಲೊಂದೇ ಅಲ್ಲ ಬಾಲಿವುಡ್ ಜೊತೆ ಹಾಲಿವುಡ್ ಮಟ್ಟದಲ್ಲಿ ಪ್ರಭಾಸ್ ಹೆಸರು ಮಾಡಿದ್ದಾರೆ. ಬಾಹುಬಲಿಗಾಗಿ ಪ್ರಭಾಸ್ ತಮ್ಮ 5 ವರ್ಷವನ್ನು ತೆಗೆದಿಟ್ಟಿದ್ದರು. ಆದ್ರೆ ಇನ್ಮುಂದೆ ಹೀಗೆ ಮಾಡುವುದಿಲ್ಲವೆಂದು ಪ್ರಭಾಸ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್, ಬಾಹುಬಲಿಗಾಗಿ ವೃತ್ತಿ ಜೀವನದ 5 ವರ್ಷವನ್ನು ಮೀಸಲಿಟ್ಟಿದೆ. ಆದ್ರೆ ಇನ್ಮುಂದೆ ಯಾವುದೇ ಚಿತ್ರಕ್ಕೆ ಇಷ್ಟು ಸಮಯ ನೀಡಲು ಸಾಧ್ಯವಿಲ್ಲ. ಇಂಥ ರಿಸ್ಕ್ ಎರಡನೇ ಬಾರಿ ತೆಗೆದುಕೊಂಡಲ್ಲಿ ನನ್ನ ವೃತ್ತಿ ಜೀವನದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಪ್ರಭಾಸ್ ಹೇಳಿದ್ದಾರೆ.

ನನ್ನ ಬಳಿ ಸೀಮಿತ ಸಮಯವಿದೆ. ಒಂದು ವೇಳೆ ಒಂದೇ ಚಿತ್ರಕ್ಕೆ 5 ವರ್ಷಗಳಷ್ಟು ಸಮಯ ನೀಡುವ ಸಂದರ್ಭ ಬಂದಲ್ಲಿ ಆ ಚಿತ್ರದ ಜೊತೆ ಬೇರೆ ಚಿತ್ರಗಳಲ್ಲಿಯೂ ನಾನು ನಟಿಸುತ್ತೇನೆಂದು ಪ್ರಭಾಸ್ ಹೇಳಿದ್ದಾರೆ. ಬಾಹುಬಲಿ ಯಶಸ್ಸಿನ ಬಗ್ಗೆಯೂ ಮಾತನಾಡಿದ ಪ್ರಭಾಸ್, ಹಿಂದಿ ಚಿತ್ರವೊಂದೇ ಅಲ್ಲ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಪಂಜಾಬಿ ಚಿತ್ರಗಳಲ್ಲಿಯೂ ನಟಿಸಲು ಸಿದ್ಧ. ನನಗೆ ಭಾಷೆ ಹಾಗೂ ಪ್ರದೇಶದ ಮಿತಿಯಿಲ್ಲವೆಂದು ಪ್ರಭಾಸ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...