alex Certify
ಕನ್ನಡ ದುನಿಯಾ       Mobile App
       

Kannada Duniya

ಫೋರ್ಬ್ಸ್ ಪಟ್ಟಿಯಲ್ಲೂ ಸದ್ದು ಮಾಡಿದ ‘ಬಾಹುಬಲಿ’ ಟೀಂ

ಭಾರತೀಯ ಚಿತ್ರರಂಗದಲ್ಲಿಯೇ ಹಲವು ದಾಖಲೆಗಳನ್ನು ಬರೆದ ‘ಬಾಹುಬಲಿ -2’ ಮತ್ತೆ ಸದ್ದು ಮಾಡಿದೆ. ಫೋರ್ಬ್ಸ್ ಇಂಡಿಯಾ ಪ್ರಕಟಿಸಿರುವ ಮನರಂಜನಾ ಕ್ಷೇತ್ರದ ಗರಿಷ್ಟ ಆದಾಯ ಗಳಿಸಿದವರ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ 232.83 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಶಾರುಖ್ ಖಾನ್ 170.5 ಕೋಟಿ ರೂ. ಆದಾಯದೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ. ಸೌತ್ ಇಂಡಿಯಾದ 13 ನಟರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯದ ‘ಬಾಹುಬಲಿ’ ಚಿತ್ರ ತಂಡದ ಮೂವರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ‘ಬಾಹುಬಲಿ -2’ ನಿರ್ದೇಶಕ ಎಸ್.ಎಸ್. ರಾಜಮೌಳಿ ವಾರ್ಷಿಕ ಆದಾಯ 55 ಕೋಟಿ ರೂ. ಆಗಿದ್ದು, 15 ನೇ ಸ್ಥಾನ ಪಡೆದುಕೊಂಡಿದ್ದಾರೆ.

ನಟ ಪ್ರಭಾಸ್ 36.25 ಕೋಟಿ ರೂ. ಆದಾಯ ಹೊಂದಿದ್ದು, ಪಟ್ಟಿಯಲ್ಲಿ 22 ನೇ ಸ್ಥಾನ ಗಳಿಸಿದ್ದಾರೆ. 22 ಕೋಟಿ ರೂ. ಆದಾಯ ಹೊಂದಿರುವ ರಾಣಾ ದಗ್ಗುಬಾಟಿ 36 ನೇ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...