alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಟ್ರಿಮೊನಿ ಜಾಹೀರಾತಿನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್…?

ಬಾಹುಬಲಿ ಖ್ಯಾತಿಯ ಪ್ರಭಾಸ್ ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಬಾಹುಬಲಿ ಯಶಸ್ಸಿನಿಂದಾಗಿ ಪ್ರಭಾಸ್ ಅಂದ್ರೆ ಸಾಕು ಹುಡುಗಿಯರೆಲ್ಲ ಮುಗಿಬೀಳ್ತಾರೆ. ಪ್ರಭಾಸ್ ಗೆ ಮದುವೆ ಪ್ರಪೋಸಲ್ ಗಳ ಸುರಿಮಳೆಯಾಗ್ತಿದೆ. ಇದೀಗ ಎರಡು ಖ್ಯಾತ ಮ್ಯಾಟ್ರಿಮೊನಿ ವೆಬ್ ಸೈಟ್ ಗಳು ತಮ್ಮ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಪ್ರಭಾಸ್ ಗೆ ಆಫರ್ ಕೊಟ್ಟಿವೆ.

ಅಷ್ಟೇ ಅಲ್ಲ ಇದಕ್ಕಾಗಿ ಭರ್ತಿ ಸಂಭಾವನೆ ಕೊಡೋದಾಗಿ ಹೇಳಿವೆ. ಆದ್ರೆ ಇದಕ್ಕೆ ಪ್ರಭಾಸ್ ಇದುವರೆಗೂ ಸಮ್ಮತಿ ಸೂಚಿಸಿಲ್ಲ. ಸದ್ಯದಲ್ಲೇ ಜಾಹೀರಾತು ಆಫರ್ ಅನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಿದ್ದಾರೆ. ಯಾಕಂದ್ರೆ ಪ್ರಭಾಸ್ ಈಗ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇದೊಂದು ಆ್ಯಕ್ಷನ್ ಡ್ರಾಮಾ. ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ. ಪ್ರಭಾಸ್ ಹುಟ್ಟುಹಬ್ಬದ ದಿನ ಸಾಹೋ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ತೆಲುಗು ಮತ್ತು ಹಿಂದಿಯಲ್ಲಿ ಒಟ್ಟೊಟ್ಟಿಗೇ ಸಾಹೋ ಚಿತ್ರೀಕರಣ ಮಾಡಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...