alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ‘ಬಲ್ಲಾಳ ದೇವ’ನ ಫಸ್ಟ್ ಲುಕ್….

rana

ಇವತ್ತು ನಟ ರಾಣಾ ದಗ್ಗುಬಾಟಿ ಅವರ ಹುಟ್ಟುಹಬ್ಬ. ಬಾಹುಬಲಿ-2 ಚಿತ್ರತಂಡ ಅವರಿಗೆ ಅಮೂಲ್ಯ ಉಡುಗೊರೆಯೊಂದನ್ನು ಕೊಟ್ಟಿದೆ. ಚಿತ್ರದಲ್ಲಿ ಬಲ್ಲಾಳದೇವನ ಅವತಾರಲ್ಲಿ ಮಿಂಚಿರುವ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಬಾಹುಬಲಿ ಮೊದಲ ಭಾಗಕ್ಕಿಂತಲೂ 2 ರಲ್ಲಿ ರಾಣಾ ವಿಲನ್ ಅವತಾರದಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

ದೇಹವನ್ನು ಹುರಿಗೊಳಿಸಿಕೊಂಡು ಅಜಾನುಬಾಹುವಿನಂತೆ ಕಾಣ್ತಿದ್ದಾರೆ. ದೇಹಕ್ಕೆ ರಕ್ಷಾ ಕವಚ, ಕೈಯಲ್ಲೊಂದು ರಾಜದಂಡ ಹಿಡಿದಿರುವ ರಾಣಾ ಲುಕ್ ಸಿಕ್ಕಾಪಟ್ಟೆ ಖಡಕ್ ಆಗಿದೆ. ಕಳೆದ ತಿಂಗಳು ‘ಬಾಹುಬಲಿ-2’ ಚಿತ್ರದಲ್ಲಿನ ಪ್ರಭಾಸ್ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು.

ಇವತ್ತು ‘ಬಾಹುಬಲಿ-2’ ಚಿತ್ರದ ವಿತರಕರಾದ ಧರ್ಮಾ ಪ್ರೊಡಕ್ಷನ್ಸ್ ರಾಣಾ ದಗ್ಗುಬಾಟಿ ಅವರ ಬಲ್ಲಾಳದೇವನ ಅವತಾರದ ಫಸ್ಟ್ ಲುಕ್ ರಿಲೀಸ್ ಮಾಡಿದೆ. ರಾಣಾ ಕಳೆದ 5 ತಿಂಗಳುಗಳಿಂದ ಈ ಲುಕ್ ಗಾಗಿಯೇ ಪ್ರತಿದಿನ ಎರಡೂವರೆ ಗಂಟೆ ವರ್ಕೌಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...