alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ -2 ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್

bahubali-2-580x395

ಬಹು ನಿರೀಕ್ಷಿತ ಚಿತ್ರ ‘ಬಾಹುಬಲಿ-2’ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಂದು ಬಾಹುಬಲಿ- 2 ಚಿತ್ರದ ನಾಯಕ ಪ್ರಭಾಸ್ ಜನ್ಮದಿನ. ಈ ಶುಭ ಸಂದರ್ಭದಲ್ಲಿ ಬಾಹುಬಲಿ -2 ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಫೋಸ್ಟರ್ ನಲ್ಲಿ ಪ್ರಭಾಸ್ ಕೋಪದಲ್ಲಿರುವಂತೆ ಕಾಣ್ತಾರೆ. ಒಂದು ಕೈನಲ್ಲಿ ಕತ್ತಿಯಿದ್ರೆ ಇನ್ನೊಂದು ಕೈನಲ್ಲಿ ಸರಪಳಿಯಿದೆ. ಪೋಸ್ಟರ್ ರಿಲೀಸ್ ವೇಳೆ ಪ್ರಭಾಸ್, ನಟಿ ತಮನ್ನಾ ಹಾಗೂ ನಿರ್ದೇಶಕ ಎಸ್. ಎಸ್. ರಾಜಮೌಳಿ ಉಪಸ್ಥಿತರಿದ್ದರು. ಬಾಹುಬಲಿ ಚಿತ್ರದ ನಂತ್ರ ಕಟ್ಟಪ್ಪಾ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ‘ಬಾಹುಬಲಿ -2’ ನಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ನಿರ್ದೇಶಕರು, ಪ್ರಭಾಸ್ ಹಾಗೂ ಕಥೆಗಾರರನ್ನು ಬಿಟ್ಟರೆ ಕಟ್ಟಪ್ಪಾ ಬಾಹುಬಲಿಯನ್ನು ಏಕೆ ಕೊಂದ ಎನ್ನುವ ಕಾರಣ ಮತ್ಯಾರಿಗೂ ತಿಳಿದಿಲ್ಲ ಎನ್ನಲಾಗ್ತಿದೆ. ಚಿತ್ರದ ಅಂತ್ಯ ಭಾಗ ಶೂಟ್ ಮಾಡುವ ವೇಳೆ ಫೋಟೋ ಹಾಗೂ ದೃಶ್ಯಗಳು ಲೀಕ್ ಆಗಿದ್ದವು. ಹಾಗಾಗಿ ನಿರ್ದೇಶಕರು ಒಂದಲ್ಲ, ಎರಡಲ್ಲ ನಾಲ್ಕು ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದಾರೆ. ಅದ್ರಲ್ಲಿ ಯಾವುದನ್ನು ನಿರ್ದೇಶಕರು ಫೈನಲ್ ಮಾಡ್ತಾರೆ ಎನ್ನುವುದು ಚಿತ್ರ ಬಿಡುಗಡೆಯಾದ ನಂತ್ರ ತಿಳಿಯಲಿದೆ. ಏಪ್ರಿಲ್ 28, 2017 ರಂದು ಚಿತ್ರ ತೆರೆಗೆ ಬರಲಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...