alex Certify
ಕನ್ನಡ ದುನಿಯಾ       Mobile App
       

Kannada Duniya

21 ದಿನಗಳಲ್ಲಿ 1500 ಕೋಟಿ ಗಳಿಕೆ ಕಂಡ ಬಾಹುಬಲಿ-2

baahubali__1495193818_749x421

ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿರುವ ಎಸ್ ಎಸ್ ರಾಜಮೌಳಿ ಚಿತ್ರ ಬಾಹುಬಲಿ-2 ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈಗ ಮತ್ತೊಂದು ಇತಿಹಾಸ ರಚನೆಯಾಗಿದೆ. ಬಾಹುಬಲಿ-2 ವಿಶ್ವದಾದ್ಯಂತ 1500 ಕೋಟಿ ರೂ. ಗಳಿಕೆ ಕಂಡಿದೆ.

ಚಿತ್ರದ ಗಳಿಕೆ ಬಗ್ಗೆ ಟ್ವಿಟರ್ ನಲ್ಲಿ ಸಾಕಷ್ಟು ಮಾಹಿತಿಗಳನ್ನು ನೀಡಲಾಗ್ತಾ ಇದೆ. ಆದ್ರೆ ಶುಕ್ರವಾರ ಚಿತ್ರ ತಂಡದ ಸದಸ್ಯರಾಗಿರುವ ಕರಣ್ ಜೋಹರ್ ಟ್ವಿಟ್ ಮಾಡಿ ಚಿತ್ರದ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಬಾಹುಬಲಿ 2 ಚಿತ್ರ 450 ಕೋಟಿ ರೂ. ಗಳಿಕೆ ಕಂಡಿದೆ. ವಿಶ್ವದಾದ್ಯಂತ 1500 ಕೋಟಿ ಆದಾಯ ಗಳಿಸಿದೆ ಎಂದಿರುವ ಕರಣ್, ಇದು ಮುಂದುವರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಹುಬಲಿ-2 ಕೇವಲ 9 ದಿನಗಳಲ್ಲಿ 1000 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಇದನ್ನು ಕರಣ್ ತಮ್ಮ ಟ್ವೀಟರ್ ನಲ್ಲಿ ತಿಳಿಸಿದ್ದರು. ಅಷ್ಟೇ ಅಲ್ಲ ಬಾಹುಬಲಿ-2 ಚಿತ್ರದ ನಟ ಪ್ರಭಾಸ್ ಕೂಡ ಫೇಸ್ಬುಕ್ ನಲ್ಲಿ ಬಾಹುಬಲಿ-2ಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಅಭಿಮಾನಿಗಳಲ್ಲಿ ಬಾಹುಬಲಿ ಕ್ರೇಜ್ ಹೀಗೆ ಉಳಿಸಿಕೊಳ್ಳಲು ಮುಂದಾಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಬಾಹುಬಲಿ-3 ತೆರೆಗೆ ತರುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...