alex Certify
ಕನ್ನಡ ದುನಿಯಾ       Mobile App
       

Kannada Duniya

ನೂರು ದಿನ ಪೂರೈಸಿದ ಬಾಹುಬಲಿ-2

bahubali_1501869000_618x347

ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ದಾಖಲೆ ಮುರಿದ ಹಾಗೂ ಹೊಸ ದಾಖಲೆಗಳನ್ನು ನಿರ್ಮಾಣ ಮಾಡಿದ ಬಾಹುಬಲಿ-2 ಚಿತ್ರ ತೆರೆಗೆ ಬಂದು 100 ದಿನ ಕಳೆದಿದೆ. ಈ ಚಿತ್ರ ಏಪ್ರಿಲ್ 28ರಂದು ತೆರೆಗೆ ಬಂದಿತ್ತು.

ಸಲ್ಮಾನ್ ಖಾನ್ ಅಭಿನಯದ  ಟ್ಯೂಬ್ಲೈಟ್ ಚಿತ್ರ ಬಿಡುಗಡೆಯಾದ ವೇಳೆ ಬಾಹುಬಲಿ-2 ಕಲೆಕ್ಷನ್ ನಲ್ಲಿ ಸ್ವಲ್ಪ ಹಿನ್ನೆಡೆಯಾಗಿತ್ತು. ಆದ್ರೆ ಮತ್ತೆ ಚಿತ್ರದ ಕಲೆಕ್ಷನ್ ವೇಗಪಡೆಯಿತು. ಬಾಹುಬಲಿ-2 ಚಿತ್ರ ಬಿಡುಗಡೆಯಾದ ಮೊದಲ ದಿನವೇ 11 ದಾಖಲೆ ಬರೆದಿದೆ.

ಮಾಧ್ಯಮಗಳ ವರದಿ ಪ್ರಕಾರ ಚಿತ್ರದ ಹಿಂದಿ ಆವೃತ್ತಿ 12 ವಾರದಲ್ಲಿ 510 ಕೋಟಿ ರೂಪಾಯಿ ಗಳಿಕೆ ಕಂಡಿದೆಯಂತೆ. ಅತಿ ಹೆಚ್ಚು ಮುಂಗಡ ಟಿಕೆಟ್ ಬುಕ್ಕಿಂಗ್ ಆದ ಚಿತ್ರದಲ್ಲಿ ಬಾಹುಬಲಿ ಮೊದಲನೇ ಸ್ಥಾನದಲ್ಲಿದೆ. ಮುಂಗಡ ಬುಕ್ಕಿಂಗ್ ನಲ್ಲಿ 36 ಕೋಟಿ ಗಳಿಕೆ ಕಂಡಿದೆ ಬಾಹುಬಲಿ.

ಬಾಹುಬಲಿ ಚಿತ್ರ ಸ್ಕ್ರೀನ್ ನಲ್ಲಿಯೂ ದಾಖಲೆ ಬರೆದಿದೆ. 9 ಸಾವಿರ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಯಾಗಿ ದಾಖಲೆ ಬರೆದಿದೆ. ಈ ಹಿಂದೆ ಸಲ್ಮಾನ್ ಖಾನ್ ಚಿತ್ರ ಸುಲ್ತಾನ್ ಮೊದಲ ಸ್ಥಾನದಲ್ಲಿತ್ತು.

ಬಾಹುಬಲಿ-2 ಚಿತ್ರ ಯಾವುದೇ ರಜಾ ದಿನ ಇಲ್ಲ ಹಬ್ಬದಂದು ಬಿಡುಗಡೆಯಾಗಿಲ್ಲ. ಆದ್ರೂ ಮೊದಲ ದಿನವೇ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಬಾಹುಬಲಿ-2. ಕಬಾಲಿ, ರಾಯಿಸ್, ಬಾಹುಬಲಿ ಚಿತ್ರದ ದಾಖಲೆ ಹಿಂದಿಕ್ಕಿ ಬಾಹುಬಲಿ-2 ಮುಂದಿದೆ. ಚಿತ್ರ ಬಿಡುಗಡೆಯಾದ  ಕೆಲವೇ ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ದಾಖಲೆ ಬರೆದಿದೆ.

53 ಕೋಟಿ ಜೊತೆಗೆ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ದಾಖಲೆ ಕೂಡ ಬಾಹುಬಲಿ-2 ಪಾಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...