alex Certify
ಕನ್ನಡ ದುನಿಯಾ       Mobile App
       

Kannada Duniya

ಅಯ್ಯಪ್ಪ ಫ್ರೆಂಡ್ ಶಿಪ್ ಬಗ್ಗೆ ಪೂಜಾಗಾಂಧಿ ಹೇಳಿದ್ದೇನು ಗೊತ್ತಾ?

pooja-ayyappa-300x225

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ನಲ್ಲಿ ಸ್ಪರ್ಧಿಗಳಾಗಿದ್ದ ಕ್ರಿಕೆಟರ್ ಅಯ್ಯಪ್ಪ ಮತ್ತು ನಟಿ ಪೂಜಾಗಾಂಧಿ ಅವರ ನಡುವೆ ಗಾಢವಾದ ಗೆಳೆತನ ಇತ್ತು. ಅಯ್ಯಪ್ಪ, ಪೂಜಾಗಾಂಧಿ ಫ್ರೆಂಡ್ ಶಿಪ್
ಬಗ್ಗೆಯೇ ಬಿಗ್ ಬಾಸ್ ಮನೆಯ ಒಳಗೆ ಮತ್ತು ಹೊರಗೆ ಭಾರೀ ಚರ್ಚೆಯೇ ನಡೆದಿತ್ತು.

ಅಯ್ಯಪ್ಪ ಅವರೊಂದಿಗೆ ಟೀ ಕುಡಿಯುವ ಮತ್ತು ಅವರೊಂದಿಗೆ ಟೀ ಪಾರ್ಟಿ ಮಾಡುವ ಬಗ್ಗೆ ಪೂಜಾ ಗಾಂಧಿಗೆ ಕಾರ್ಯಕ್ರಮ ನಿರೂಪಕರಾಗಿದ್ದ, ಬಹುಭಾಷಾ ನಟ ಕಿಚ್ಚ ಸುದೀಪ್ ಕೂಡ ರೇಗಿಸಿದ್ದುಂಟು. ಇದೀಗ ‘ಬಿಗ್ ಬಾಸ್’ ನಿಂದ ಹೊರಬಂದ ಬಳಿಕ ಪೂಜಾಗಾಂಧಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ‘ದಂಡುಪಾಳ್ಯ-2’ ನಲ್ಲಿ ತೊಡಗಿಕೊಂಡಿರುವ ಪೂಜಾಗಾಂಧಿ, ದಂಡುಪಾಳ್ಯ ನನ್ನ ಸಿನಿಮಾಗಳಲ್ಲಿ ಅಚ್ಚುಮೆಚ್ಚಿನದು, ನನಗೆ ವಿಶಿಷ್ಠತೆ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

‘ಬಿಗ್ ಬಾಸ್’ ನಲ್ಲಿ ಅಯ್ಯಪ್ಪ ಅವರೊಂದಿಗೆ ನಾನು ನೈಜವಾಗಿಯೇ ಇದ್ದೆ. ಅವರ ಕುರಿತಾದ ನನ್ನ ಭಾವನೆಗಳು ನಕಲಿಯಲ್ಲ, ಅಲ್ಲದೇ, ಶೋನಲ್ಲಿ ವಿನ್ ಆಗಲು ಮಾಡಿದ ನಾಟಕವೂ ಅಲ್ಲ ಎಂದು ಹೇಳಿದ ಪೂಜಾಗಾಂಧಿ, ಅಯ್ಯಪ್ಪ ಅವರೊಂದಿಗೆ ಫ್ರೆಂಡ್ ಶಿಪ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸದ್ಯ ನಾನು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದಷ್ಟೇ ತಿಳಿಸಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...