alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಜರ್ನಿ ರಹಸ್ಯ ಬಹಿರಂಗಪಡಿಸಿದ ಅಯ್ಯಪ್ಪ

NC-Aiyappa-Bigg-Boss

‘ಬಿಗ್ ಬಾಸ್’ ಮನೆಯಿಂದ ಹೊರಬಂದಿರುವ ಕ್ರಿಕೆಟರ್ ಅಯ್ಯಪ್ಪ ಅವರು ‘ಸೂಪರ್ ಸಂಡೇ ವಿತ್ ಸುದೀಪ್’ ವೇದಿಕೆಯಲ್ಲಿ ತಮ್ಮ ಇಷ್ಟು ದಿನದ ಜರ್ನಿಯ ರಹಸ್ಯವನ್ನು ಬಿಚ್ಚಿಟ್ಟರು. ಘಟಾನುಘಟಿಗಳ ಮಧ್ಯೆ ತಾವು ಉಳಿದುಕೊಳ್ಳಲು ಏನು ಮಾಡಬೇಕಾಯಿತು ಎಂಬುದನ್ನು ಸುದೀಪ್ ಬಳಿ ಹೇಳಿಕೊಂಡರು.

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಾಗ ಚಂದನ್ ಮಾತ್ರ ಫ್ರೆಂಡ್ ಆಗಿದ್ದ, ಅಲ್ಲಿ ಸ್ಟ್ರಾಟಜಿ ಶುರುವಾಯ್ತು, ನಾನು ಮನೆಯಲ್ಲಿ ಉಳಿದುಕೊಳ್ಳಬೇಕೆಂಬ ಕಾರಣದಿಂದ ನನ್ನ ದಾರಿ ಕಂಡುಕೊಳ್ಳಬೇಕಾಯಿತು. ಪೂಜಾಗಾಂಧಿ ಹಾಗೂ ಗೌತಮಿ ಇಬ್ಬರೂ ಫ್ರೆಂಡ್ ಎಂದು ಅಯ್ಯಪ್ಪ ಹೇಳಿದರು. ಪೂಜಾಗಾಂಧಿ ಅವರೊಂದಿಗೆ ಕಾಫಿ ಪೆಂಡಿಂಗ್ ಇದೆಯಲ್ಲಾ ಎಂದು ಸುದೀಪ್ ಕೇಳಿದಾಗ, ಅವರು ಹೊರಗೆ ಬಂದ ನಂತರ ಸಿಕ್ಕರೆ ಕಾಫಿ ಕುಡಿಯುತ್ತೇವೆ. ಸಹಜವಾಗಿಯೇ ಬಿಗ್ ಬಾಸ್ ಜರ್ನಿ ಬಗ್ಗೆ ಮಾತಾಡುತ್ತೇವೆ ಎಂದ ಅಯ್ಯಪ್ಪ, ಹೊರಗೆ ಬಂದ ನಂತರ ವ್ಯೂ ಬೇರೆ ರೀತಿ ಇರುತ್ತೆ ಎಂದು ಹೇಳಲು ಮರೆಯಲಿಲ್ಲ.

ಅಯ್ಯಪ್ಪ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದಿರುವ ಸ್ಪರ್ಧಿಗಳಲ್ಲಿ ರೆಹಮಾನ್, ಚಂದನ್ ಗೆಲ್ಲಲು ಸಾಧ್ಯವಿಲ್ಲ. ಆನಂದ್, ಪೂಜಾ ಗೆಲ್ಲಬಹುದು. ಸುನಾಮಿ ಕಿಟ್ಟಿ ಒಳ್ಳೆಯ ಸ್ಪರ್ಧಿ. ಟಾಸ್ಕ್ ಹೇಗೆ ಮಾಡಬೇಕೆಂಬುದನ್ನು ಅವನಿಂದ ಕಲಿತೆ. ಶ್ರುತಿ ನಾಟಕ ಮಾಡ್ತಾರೆ. ಪೂಜಾ ಸ್ಟ್ರೈಟ್ ಆಗಿದ್ದಾರೆ. ರೆಹಮಾನ್ ಅನ್ ಫಿಟ್ ಎಂದು ಅಯ್ಯಪ್ಪ ತಮ್ಮ ಅನಿಸಿಕೆ ಹಂಚಿಕೊಂಡರು. ಕ್ರಿಕೆಟ್ ಭಾಷೆಯಲ್ಲಿ ಸದಸ್ಯರ ಬಗ್ಗೆ ಹೇಳುತ್ತಾ, ಆನಂದ್ ಫ್ರಂಟ್ ಪುಟ್ ಡಿಫರೆನ್ಸ್ ಆಡಿದರೆ, ವೆಂಕಟ್ ಹಿಟ್ ವಿಕೆಟ್ ಆದರು. ರೆಹಮಾನ್ ರನ್ ಔಟ್, ಪೂಜಾ ಕ್ಲೀನ್ ಬೌಲ್ಡ್ ಹೀಗೆ ಅಭಿಪ್ರಾಯ ಹಂಚಿಕೊಂಡರು ಅಯ್ಯಪ್ಪ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...