alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ನಿಂದ ಬಳಲ್ತಿದ್ದಾಳೆ ಈ ನಟನ ಪತ್ನಿ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಾಹಿರಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ತಮ್ಮ ರೋಗದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ.

ಫೋಟೋ ಒಂದನ್ನು ಹಾಕಿರುವ ತಾಹಿರಾ, ಈ ಫೋಟೋ ನೋಡಿದ್ರೆ ನಿಮಗೆ ನೋವಾಗಬಹುದು. ಆದ್ರೆ ಇದು ಈಗಿನ ಸತ್ಯ. ನಾನು ಬಲ ಭಾಗದ ಸ್ತನ ಕ್ಯಾನ್ಸರ್ DCIS ನಿಂದ ಬಳಲುತ್ತಿದ್ದೇನೆ. ಇದಕ್ಕೆ 0 ಕ್ಯಾನ್ಸರ್ ಎಂದೂ ಕರೆಯುತ್ತಾರೆಂದು ಬರೆದಿದ್ದಾರೆ.

ಕ್ಯಾನ್ಸರ್ ಕೋಶಗಳು ವೇಗವಾಗಿ ಬೆಳೆಯುತ್ತಿವೆ. ನಾನು ಎಂಜಲಿನಾ ಜೋಲಿ ಹಾಫ್ ಇಂಡಿಯನ್ ಆಗಿದ್ದೇನೆ. ಎಂಜಲಿನಾ ಹಿಂದಿಕ್ಕುವ ದಿನ ಬರ್ತಿದೆ ಎಂದು ವೈದ್ಯರ ಬಳಿ ಹೇಳಿದ್ದೇನೆ ಎಂದು ತಾಹಿರಾ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಮಹಿಳೆಯರಿಗೆ ಜಾಗೃತರಾಗಿರುವಂತೆ ಸಲಹೆ  ನೀಡಿದ್ದಾರೆ. ಎಲ್ಲ ವಯಸ್ಸಿನ ಮಹಿಳೆಯರು ಇದ್ರ ಲಕ್ಷಣ ತಿಳಿದಿರಬೇಕು. ಆಗಾಗ ವೈದ್ಯರ ಭೇಟಿ ಮಾಡಿ ಪರೀಕ್ಷೆ ಮಾಡಿಕೊಳ್ಳಿ ಎಂದು ತಾಹಿರಾ ಹೇಳಿದ್ದಾರೆ.

2011 ರಲ್ಲಿ ಆಯುಷ್ಮಾನ್ ಖುರಾನ ಜೊತೆ ತಾಹಿರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಸ್ನೇಹಿತನನ್ನು ಮದುವೆಯಾಗಿರುವ ತಾಹಿರಾ ವೃತ್ತಿಯಲ್ಲಿ ಲೇಖಕಿ. ಪತ್ನಿ ತಾಹಿರಾ ಆರೋಗ್ಯದಲ್ಲಿ ಈಗ ಸುಧಾರಣೆಯಾಗಿದ್ದು, ಖುಷಿ ವಿಚಾರವಿದು ಎಂದು ಆಯುಷ್ಮಾನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...