alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸ್ಪರ್ಧಿಯಾಗಬೇಕೇ? ಹಾಗಿದ್ರೆ ಹೀಗೆ ಮಾಡಿ

ಸೆಪ್ಟಂಬರ್ ನಲ್ಲಿ ಆರಂಭವಾಗಲಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆ ಆರಂಭವಾಗಿದೆ. ಖ್ಯಾತನಾಮರು ಈ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ರೆ, ಸಾಮಾನ್ಯ ಜನ ಸಹ ಬಿಗ್ ಬಾಸ್ ನಲ್ಲಿ ಭಾಗವಹಿಸಬಹುದು.

ಆರನೇ ಆವೃತ್ತಿಯಲ್ಲೂ ಸೆಲೆಬ್ರೆಟಿ ಹಾಗೂ ಸಾಮಾನ್ಯ ಜನರ ಸಮಾಗಮವಾಗಲಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿ ಸಾಮಾನ್ಯ ಜನ, ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದನ್ನು ಮನವರಿಕೆ ಮಾಡಿಕೊಂಡಿರುವ ಬಿಗ್ ಬಾಸ್ ತಂಡ, ಈ ಬಾರಿಯೂ ಸಾಮಾನ್ಯ ಜನರಿಗೆ ಅವಕಾಶ ನೀಡಲು ತೀರ್ಮಾನಿಸಿದೆ.

ಐದನೇ ಆವೃತ್ತಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೇಘನಾ ಗೌಡ, ಸುಮಾ ರಾಜಕುಮಾರ್, ನಿವೇದಿತಾ ಗೌಡ, ದಿವಾಕರ್ ಕಾಮನ್ ಮ್ಯಾನ್ ಆಗಿ ಮನೆಗೆ ಎಂಟ್ರಿ ನೀಡಿದ್ರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಾಣಾಕ್ಷ ಆಟದ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದ ದಿವಾಕರ್, ರನ್ನರ್ ಅಪ್ ಸಹ ಆಗಿದ್ದರು. ಕಳೆದ ಬಾರಿ ರ್ಯಾಂಪ್ ಹಾಡುಗಾರ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ರು.

ಈ ಬಾರಿಯೂ ಸಹ ಸಾರ್ವಜನಿಕರಿಗೆ ಬಿಗ್ ಬಾಸ್ ನಲ್ಲಿ ವೇದಿಕೆ ಸಿಗಲಿದ್ದು, ತಮ್ಮ ಸ್ವ ವಿವರಗಳೊಂದಿಗೆ ಮೂರು ನಿಮಿಷದ ವಿಡಿಯೋ ಮಾಡಿ ಅಪ್ ಲೋಡ್ ಮಾಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...