alex Certify
ಕನ್ನಡ ದುನಿಯಾ       Mobile App
       

Kannada Duniya

ನೆಟ್ಟಲ್ಲಿ ಹಿಟ್ಟಾಯ್ತು ‘ಸರ್ಕಾರ್’ ಚಿತ್ರದ ಹಾಡಿಗೆ ಅತುಲ್ಯಾ ಮಾಡಿದ ನೃತ್ಯ !

ಕಾದಲ್ ಕಣ್ ಕಟ್ಟುಡೆ, ಯೆಮಾಲಿಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ತಮಿಳು ನಟಿ ಅತುಲ್ಯಾ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಅವರು ವಿಜಯ್ ಅವರ ಇತ್ತೀಚಿನ ಚಿತ್ರ ಸರ್ಕಾರ್‌ ನ ಸೂಪರ್ ಹಿಟ್ ಹಾಡಾದ “ಒಎಂಜಿ ಪೊಣ್ಣು” ಗೆ ನೃತ್ಯ ಮಾಡಿದ್ದಾರೆ. ಉದಯೋನ್ಮುಖ ತಾರೆ ಅತುಲ್ಯಾ ಅವರ ಕುಣಿತ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಅತುಲ್ಯಾ ನಟಿಸಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇವರು ನಟಿಸಿರುವ ನಾಡೋಡಿಯಲ್ 2 ಹಾಗೂ ಸುತ್ತು ಪಿಡಿಕಾ ಉತ್ತರವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...