alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಅಂತ್ಯಸಂಸ್ಕಾರದ ವೇಳೆ ನಕ್ಕ ನಟಿಗೆ ಟ್ವಿಟ್ಟಾರ್ಥಿಗಳ ತರಾಟೆ

ಶನಿವಾರದಂದು ದುಬೈನಲ್ಲಿ ಆಕಾಲಿಕವಾಗಿ ಸಾವನ್ನಪ್ಪಿದ ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿಯವರ ಅಂತಿಮ ಸಂಸ್ಕಾರ ಮುಂಬೈನ ಪವನ್ ಹನ್ಸ್ ಚಿತಾಗಾರದಲ್ಲಿ ಬುಧವಾರದಂದು ನೆರವೇರಿದೆ. ತಮ್ಮ 54 ನೇ ವಯಸ್ಸಿನಲ್ಲಿ ಮರಣವನ್ನಪ್ಪಿದ ಶ್ರೀದೇವಿಯವರ ನಿಧನಕ್ಕೆ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.

ದುಬೈನಲ್ಲಿನ ಕಾನೂನು ಪ್ರಕ್ರಿಯೆ ಬಳಿಕ ಮಂಗಳವಾರ ರಾತ್ರಿ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಖ್ಯಾತ ಉದ್ಯಮಿ ಅನಿಲ್ ಅಂಬಾನಿಯವರ ಖಾಸಗಿ ಜೆಟ್ ವಿಮಾನದಲ್ಲಿ ಮುಂಬೈಗೆ ತರಲಾಗಿದ್ದು, ಅಂಧೇರಿಯಲ್ಲಿರುವ ‘ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್’ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ಶ್ರೀದೇವಿಯವರ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನಟ-ನಟಿಯರೂ ಅಂತಿಮ ದರ್ಶನ ಪಡೆದಿದ್ದರು. ಈ ವೇಳೆ ನಟಿ ಜಾಕ್ವೇಲಿನ್ ಫರ್ನಾಡೀಸ್ ನಡೆದುಕೊಂಡ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ದುಃಖದ ಸನ್ನಿವೇಶದಲ್ಲೂ ಸಂದರ್ಭದ ಗಾಂಭೀರ್ಯತೆಯನ್ನರಿದ ಜಾಕ್ವೇಲಿನ್, ನಗುನಗುತ್ತಾ ಶ್ರೀದೇವಿಯವರ ಅಂತಿಮ ದರ್ಶನ ಮಾಡಿದ್ದಾರೆ. ಇದು ಟ್ವಿಟ್ಟಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕೇವಲ ಪ್ರಚಾರಕ್ಕಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಡಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...