alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಧೋನಿ ಜೊತೆ ಸಂಜಯ್ ದತ್ ಪತ್ನಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿದೆ. ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಿ ಪಡೆದಿದ್ದ ಎಂ.ಎಸ್. ಧೋನಿ ಬ್ಯಾಟ್ಸ್ ಮನ್ ಹಿಂದೆ ನಿಂತು ರೋಹಿತ್ ಗೆ ಅಮೂಲ್ಯ ಸಲಹೆ ನೀಡ್ತಿದ್ದಾರೆ. ಪಂದ್ಯವನ್ನು ಕೊನೆ ಕ್ಷಣದಲ್ಲಿ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಧೋನಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗ್ತಾರೆ.

ಬಾಲಿವುಡ್ ನಟ ಸಂಜಯ್ ದತ್ ಪತ್ನಿ ಮಾನ್ಯತಾ ಕೂಡ ಧೋನಿಯ ದೊಡ್ಡ ಅಭಿಮಾನಿ. ದುಬೈನಲ್ಲಿ ಧೋನಿ ಭೇಟಿ ಮಾಡಿದ ಮಾನ್ಯತಾ ದತ್ ಫೋಟೋ ಕ್ಲಿಕ್ಕಿಸಿದ್ದಾರೆ. ಅದನ್ನು ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಹಾಕಿಕೊಂಡು ಖುಷಿ ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಆಟಗಾರನೊಂದೇ ಅಲ್ಲ ಮಹಾನ್ ವ್ಯಕ್ತಿತ್ವವುಳ್ಳವ ಎಂದು ಮಾನ್ಯತಾ, ಧೋನಿಯನ್ನು ಹೊಗಳಿದ್ದಾರೆ. ಬಾಲಿವುಡ್ ನಲ್ಲಿ ಧೋನಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಧೋನಿ ಜೀವನ ಚರಿತ್ರೆ ತೆರೆ ಮೇಲೆ ಬಂದು ಯಶಸ್ಸು ಕಂಡಿದೆ. ಎರಡನೇ ಆವೃತ್ತಿಗೆ ತಯಾರಿ ನಡೆದಿದೆ. ಧೋನಿಯ ಎರಡನೇ ಸಿನಿಮಾದಲ್ಲಿ 2018 ರ ಕ್ರಿಕೆಟ್ ವೃತ್ತಿ ಜೀವನವನ್ನು ತೋರಿಸಲಾಗುವುದಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...