alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯ ತುಂಟಾಟ ನೋಡಿ ನಗ್ತಿದ್ದಾಳೆ ನವವಧು ಅನುಷ್ಕಾ….

ದಿಢೀರ್ ಅಂತಾ ಇಟಲಿಗೆ ಹಾರಿ, ಅಲ್ಲಿ ಗುಟ್ಟಾಗಿ ಮದುವೆಯಾದ ಲವ್ ಬರ್ಡ್ಸ್ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಭಾರತದಲ್ಲೇ ಮದುವೆ ಆಗಬಹುದಿತ್ತು ಅಂತಾ ಅಭಿಮಾನಿಗಳು ಉದ್ಘರಿಸಿದ್ದೂ ಇದೆ. ಮದುವೆ ಸ್ಥಳ ಬೇರೆಯಾದ್ರೂ, ನಗು, ತಮಾಷೆ, ಸಂತೋಷಕ್ಕೆ ಅಲ್ಲಿ ಬರ ಇರಲಿಲ್ಲ.

ವಿರುಷ್ಕಾ ಮದುವೆಯ ಪ್ರತಿ ಫೋಟೋದಲ್ಲೂ ನೀವು ಅದನ್ನು ನೋಡಬಹುದು. ಮದುವೆಯ ಇನ್ನೊಂದಷ್ಟು ಫೋಟೋಗಳು ಈಗ ಸಾಮಾಜಿಕ ತಾಣದಲ್ಲಿ ಹರಿದಾಡ್ತಿವೆ. ವಿರಾಟ್ ಫೋಟೋಗಾಗಿ ಚಿತ್ರ ವಿಚಿತ್ರವಾಗಿ ಪೋಸ್ ಕೊಟ್ಟಿದ್ದಾರೆ. ಕೊಹ್ಲಿಯ ಫನ್ನಿ ಫೇಸ್ ನೋಡಿ ಅನುಷ್ಕಾ ನಗುತ್ತಿರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಮದುವೆ ಬಳಿಕ ಪಾರ್ಟಿಯಲ್ಲಿ ಕ್ಲಿಕ್ಕಿಸಿದ ಫೋಟೋ ಇದು. ಸದ್ಯ ನವದಂಪತಿ ಫಿನ್ ಲ್ಯಾಂಡ್ ನಲ್ಲಿ ಹನಿಮೂನ್ ಆಚರಿಸ್ತಿದ್ದಾರೆ. ಡಿಸೆಂಬರ್ 21 ಮತ್ತು 26ರಂದು ದೆಹಲಿ ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಕೂಡ ಏರ್ಪಡಿಸಿದ್ದಾರೆ. ಹಾಗಾಗಿ ಸದ್ಯದಲ್ಲೇ ಭಾರತಕ್ಕೆ ಮರಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...