alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್-ಅಮಿತಾಭ್ ಸಾಲಿಗೆ ಸೇರ್ಪಡೆಯಾದ ಸಲ್ಮಾನ್

ಅಮೀರ್ ಖಾನ್ ಕೇಂದ್ರ ಪ್ರವಾಸೋದ್ಯಮದ ರಾಯಭಾರಿಯಾಗಿದ್ದರು. ಅಮಿತಾಭ್ ಬಚ್ಚನ್ ಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ. ಇದೀಗ ಈ ನಟರ ಸಾಲಿಗೆ ಸಲ್ಮಾನ್ ಖಾನ್ ಸೇರ್ಪಡೆಯಾಗಿದ್ದಾರೆ. ಅವರು ಅರುಣಾಚಲ ಪ್ರದೇಶ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ.

ಸಾಂಪ್ರದಾಯಿಕ ದಿರಿಸಿನೊಂದಿಗಿನ ತಮ್ಮ ಫೊಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಸಲ್ಮಾನ್ ಈ ಸಂಗತಿಯನ್ನು ಪ್ರಕಟಿಸಿದ್ದಾರೆ. ಅರುಣಾಚಲಪ್ರದೇಶದ ಸಾಂಪ್ರದಾಯಿಕ ಪ್ರೀತಿಯ ಮಾನ್ಪಾ ಜಾಕೆಟ್ ಧರಿಸಿದ್ದೇನೆ. ನೀವು ಶಾಂತಿಯಿಂದ ನಿಜವಾದ ಪರಿಸರದೊಂದಿಗಿರಲು ಬಯಸುವಿರಾದರೆ ಸುಂದರ ಅರುಣಾಚಲ ಪ್ರದೇಶಕ್ಕೆ ಬನ್ನಿ ಎಂದು ಅವರು ಆಹ್ವಾನವನ್ನೂ ನೀಡಿದ್ದಾರೆ.

ಇದರ ಹೊರತಾಗಿ ಸಲ್ಮಾನ್, ಭಾರತ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ತಮ್ಮ ಅಳಿಯ ಆಯುಷ್ ಶರ್ಮಾನ ಬಾಲಿವುಡ್ ಪ್ರವೇಶ ಚಿತ್ರವಾಗಿರುವ ಲವ್ ಯಾತ್ರಿಯ ನಿರ್ಮಾಣ ಕಾರ್ಯದಲ್ಲೂ ಸಲ್ಮಾನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...