alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಶಿ ಖಾನ್ ಜೊತೆ ರಾಖಿ ಸಾವಂತ್ ಭರ್ಜರಿ ಸ್ಟೆಪ್

ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ಬಿಗ್ ಬಾಸ್ ಸ್ಪರ್ಧಿಯಾಗಿದ್ದಾಗಲೂ ರಾಖಿ ತನ್ನ ನೇರ ನಡೆ ನುಡಿಗಳಿಂದಾಗಿ ಇತರೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಳು.

ಮತ್ತೊಂದು ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಆರ್ಶಿ ಖಾನ್ ಗೆ ಕೂಡಾ ವಿವಾದಗಳು ಹೊಸತೇನಲ್ಲ. ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದ ಆರ್ಶಿ, ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಸಹ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಳು.

ಇದೀಗ ಈ ಇಬ್ಬರು ಕಿರಿಕ್ ಬೆಡಗಿಯರು ಒಂದಾಗಿದ್ದು, ಬಾಲಿವುಡ್ ಹಿಟ್ ಸಾಂಗ್ ಒಂದಕ್ಕೆ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ ರಾಖಿ, ಆರ್ಶಿ ಖಾನ್ ನನ್ನ ಆತ್ಮೀಯ ಗೆಳತಿ ಎಂದು ಹೇಳಿಕೊಂಡಿದ್ದಾಳೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಖಿ ಡಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರಿಬ್ಬರು ‘ಬಿಗ್ ಬಾಸ್’ ನ ಒಂದೇ ಸೀಸನ್ ನಲ್ಲಿ ಭಾಗವಹಿಸಿದ್ದರೆ ಈ ರೀತಿ ಇರುತ್ತಿದ್ದರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...