alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸ್ಪರ್ಧಿಯ ಡ್ರೆಸ್ ‘ರಹಸ್ಯ’ ಬಿಚ್ಚಿಟ್ಟ ಆರ್ಶಿ…!

‘ಬಿಗ್ ಬಾಸ್’ ಮನೆಯೆಂದರೇ ಅದು ವಿವಾದಗಳ ಆಗರ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಟಿ.ಆರ್.ಪಿ. ಕಾರಣಕ್ಕಾಗಿಯೇ ವಿವಾದಾತ್ಮಕ ಸೆಲೆಬ್ರಿಟಿಗಳನ್ನು ‘ಬಿಗ್ ಬಾಸ್’ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತಿದ್ದು, ಟಿ.ಆರ್.ಪಿ. ಗಿಟ್ಟಿಸಿಕೊಳ್ಳುವಲ್ಲಿ ಕಾರ್ಯಕ್ರಮದ ಆಯೋಜಕರು ಯಶಸ್ವಿಯಾಗುತ್ತಿದ್ದಾರೆ.

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ‘ಬಿಗ್ ಬಾಸ್’ ನಡೆಸಿಕೊಡುತ್ತಿದ್ದು, ಸ್ಪರ್ಧಿಗಳ ಬಿಂದಾಸ್ ನಡವಳಿಕೆಯ ಕಾರಣಕ್ಕೆ ಕಾರ್ಯಕ್ರಮದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಸ್ಪರ್ಧೆಯಿಂದ ಈಗಾಗಲೇ ಹೊರ ಬಿದ್ದಿರುವ ಆರ್ಶಿ ಖಾನ್, ಕುಡಿದ ಅಮಲಿನಲ್ಲಿ ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿ ಕುರಿತು ಬಡಬಡಿಸಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇದರ ಮಧ್ಯೆ ಆರ್ಶಿ ಖಾನ್ ‘ಬಿಗ್ ಬಾಸ್’ ನಲ್ಲಿ ತನ್ನ ಸಹ ಸ್ಪರ್ಧಿಯಾಗಿದ್ದ ಹೀನಾ ಖಾನ್ ಡ್ರೆಸ್ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾಳೆ.

ಈ ಬಾರಿಯ ‘ಬಿಗ್ ಬಾಸ್’ ವಿನ್ನರ್ ಎಂದೇ ಹೇಳಲಾಗುತ್ತಿರುವ ಹೀನಾ ಖಾನ್ ಕುರಿತು ಲಘುವಾಗಿ ಮಾತನಾಡಿರುವ ಆರ್ಶಿ ಖಾನ್, ಆಕೆ ಧರಿಸುತ್ತಿರುವ ಡ್ರೆಸ್ ಗಳೆಲ್ಲವೂ ಬಾಡಿಗೆಯದ್ದು ಎಂದು ಲಘುವಾಗಿ ಮಾತನಾಡಿದ್ದಾಳೆ.

ಪ್ರತಿ ಮೂರ್ನಾಲ್ಕು ದಿನಕ್ಕೊಮ್ಮೆ ಆಕೆ ತಾನು ತಂದಿರುವ ಡ್ರೆಸ್ ಗಳನ್ನು ಡಿಸೈನರ್ ಗೆ ಹಿಂದಿರುಗಿಸುತ್ತಿದ್ದು, ಇದೆಲ್ಲವೂ ಬಾಡಿಗೆಯದ್ದು ಎಂಬ ಅಂಶ ಒಮ್ಮೆ ಆಕೆಯ ನೈಟಿ ಧರಿಸಿದ ವೇಳೆ ನನ್ನ ಅರಿವಿಗೆ ಬಂತು ಎಂದು ಆರ್ಶಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ತಾನು ಧರಿಸಿದ್ದ ನೈಟಿ ವಾಪಾಸ್ ಕೇಳಿದ ಹೀನಾ ಖಾನ್, ಅದನ್ನು ಹಿಂದಿರುಗಿಸಬೇಕಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...