alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ ಚಿತ್ರದಲ್ಲಿ ನಟಿಸಬೇಕಿತ್ತು ಈ ಹಾಲಿವುಡ್ ನಟ

ಅವರು ಮೊದಲೇ ರಜನಿ ಅಭಿನಯದ ಶಂಕರ್ ನಿರ್ದೇಶನದ ರೋಬೋ2.0 ಸಿನಿಮಾಗೆ ಓಕೆ ಅಂದುಬಿಟ್ಟಿದ್ದರೆ ಅಕ್ಷಯ್ ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಅವರು ಎಸ್ ಅನ್ನದ ಕಾರಣಕ್ಕೆ ಅಕ್ಷಯ್ ಕುಮಾರ್ ಸೌತ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು.

ಹೌದು ಹಾಲಿವುಡ್ ನ ಟರ್ಮಿನೇಟರ್ ಅರ್ನಾಲ್ಡ್, ರಜನಿಗೆ ಎದುರಾಗಿ ಕ್ರೌ ಮ್ಯಾನ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದ್ರೆ ಅರ್ನಾಲ್ಡ್ , ಶಂಕರ್ ಪ್ರಾಜೆಕ್ಟ್ ನಲ್ಲಿ ನಟಿಸೋದಕ್ಕೆ ಹಿಂದೇಟು ಹಾಕಿದರು. ಹಾಗಾಗಿ ರಜನಿಗೆ ವಿಲನ್ ಆಗಿ ಆನಂತರ ಅಕ್ಷಯ್ ಕುಮಾರ್ ಬಣ್ಣ ಹಚ್ಚಬೇಕಾಯ್ತು.

ಅರ್ನಾಲ್ಡ್ ಈ ಚಿತ್ರಕ್ಕೆ ನೋ ಅನ್ನೋದಕ್ಕೆ ಅವರದ್ದೇ ಕಾರಣಗಳಿದ್ದವು. ಅಮೆರಿಕದಲ್ಲಿ ಅರ್ನಾಲ್ಡ್ ಅವರನ್ನು ಭೇಟಿಯಾದ ಶಂಕರ್, ರೋಬೋ ಸಿನಿಮಾದ ಕಥೆ ಹೇಳಿ ಕ್ರೌ ಮ್ಯಾನ್ ರೋಲ್ನಲ್ಲಿ ನಟಿಸೋಕೆ ಕೇಳಿಕೊಂಡಿದ್ದರು. ಆದ್ರೆ ಅರ್ನಾಲ್ಡ್ ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಚಿತ್ರವನ್ನು ಚಿತ್ರೀಕರಿಸಬೇಕು ಮತ್ತು ಕಾಂಟ್ರ್ಯಾಕ್ಟ್ ಮೇಲೆ ಕೆಲಸ ಮಾಡ್ತೀನಿ ಅನ್ನೊ ಷರತ್ತು ವಿಧಿಸಿದರಂತೆ.

ಅದ್ಯಾಕೋ ಶಂಕರ್ ಗೆ ಈ ಷರತ್ತುಗಳು ಇಷ್ಟವಾಗಲಿಲ್ಲ. ಹಾಗಾಗಿಯೇ ಅರ್ನಾಲ್ಡ್ ಅವರನ್ನ ಕೈ ಬಿಟ್ಟು ಅಕ್ಷಯ್ ಕುಮಾರ್ ಗೆ ಕಥೆ ಹೇಳಿದರಂತೆ. ಅಕ್ಷಯ್ ಕುಮಾರ್ ಖುಷಿಯಿಂದಲೇ ಈ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡರಂತೆ.

ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದರೂ ಅದನ್ನೆಲ್ಲಾ ನಿಭಾಯಿಸಿಕೊಂಡೇ ಚಿತ್ರೀಕರಣ ನಡೆಸಲಾಯ್ತಂತೆ. ಈಗಾಗ್ಲೇ ಟ್ರೇಲರ್ ನಿಂದ ಸದ್ದು ಮಾಡ್ತಿರೋ ಸಿನಿಮಾ ನವೆಂಬರ್ 27ಕ್ಕೆ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...