alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಖ್ಯಾತ ನಟ ಅರ್ಜುನ್ ಸರ್ಜಾಗೂ ತಟ್ಟಿದ ‘ಮೀ ಟೂ’ ಬಿಸಿ

ಹಾಲಿವುಡ್ ನಿಂದ ಆರಂಭವಾಗಿ ಬಾಲಿವುಡ್ ನಲ್ಲಿ ಹಲವು ಖ್ಯಾತನಾಮರ ಅಸಲಿಯತ್ತನ್ನು ಅನಾವರಣ ಮಾಡುತ್ತಿರುವ ಲೈಂಗಿಕ ಕಿರುಕುಳದ ‘ಮೀ ಟೂ’ ಆಂದೋಲನ, ಈಗ ದಕ್ಷಿಣ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಹಲವು ನಟಿಯರು ಒಬ್ಬೊಬ್ಬರಾಗಿ ತಮಗಾದ ಕಹಿ ಅನುಭವವನ್ನು ಬಿಚ್ಚಿಡುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟಿ ಸಂಗೀತಾ ಭಟ್, ತಾವು ಅನುಭವಿಸಿದ ಕಿರುಕುಳವನ್ನು ಬಹಿರಂಗಪಡಿಸಿದ್ದರಲ್ಲದೆ, ಇದರಿಂದ ನೊಂದು ತಾವು ಚಿತ್ರರಂಗ ತೊರೆಯುತ್ತಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ನಟಿ ಸಂಜನಾ, ‘ಗಂಡ-ಹೆಂಡತಿ’ ಚಿತ್ರದ ವೇಳೆ ತಮಗಾದ ಲೈಂಗಿಕ ಕಿರುಕುಳವನ್ನು ತೆರೆದಿಟ್ಟಿದ್ದರು.

ಇದೀಗ ನಟಿ ಶ್ರುತಿ ಹರಿಹರನ್, ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಗುರುತರ ಆರೋಪ ಮಾಡಿದ್ದು, ‘ವಿಸ್ಮಯ’ ಚಿತ್ರದ ಚಿತ್ರೀಕರಣದ ವೇಳೆ ತಮ್ಮೊಂದಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸಲುಗೆ ಬೆಳೆಸಲು ಅರ್ಜುನ್ ಸರ್ಜಾ ಯತ್ನಿಸಿದ್ದರೆಂದು ಆರೋಪಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶೃತಿ ಹರಿಹರನ್ ಈ ಸಂಗತಿ ಹೇಳಿದ್ದಾರೆನ್ನಲಾಗಿದ್ದು, ಅರ್ಜುನ್ ಸರ್ಜಾ ತಮ್ಮೊಂದಿಗೆ ಡಿನ್ನರ್ ಗೆ ಬರಬೇಕೆಂದು ಪದೇ ಪದೇ ಆಹ್ವಾನಿಸಿದ್ದರೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...