alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹ್ನವಿ ಡ್ರೆಸ್ ಕುರಿತು ವರದಿ ಮಾಡಿದ್ದ ವೆಬ್ ಸೈಟ್ ವಿರುದ್ದ ಅರ್ಜುನ್ ಕೆಂಡಾಮಂಡಲ

ತನ್ನ ಸಹೋದರಿ ಜಾಹ್ನವಿ ಹಾಕಿಕೊಂಡಿದ್ದ ಡ್ರೆಸ್ ಬಗ್ಗೆ ಕೆಟ್ಟದಾಗಿ ಬರೆದು ಪ್ರಕಟಿಸಿದ್ದ ವೆಬ್ ಸೈಟ್ ಒಂದರ ವಿರುದ್ಧ ನಟ ಅರ್ಜುನ್ ಕಪೂರ್ ಕೆಂಡಾಮಂಡಲವಾಗಿದ್ದಾರೆ.

ಇತ್ತೀಚಿಗೆ ಜಾಹ್ನವಿ ಕಪೂರ್ ಬಿಳಿ ಬಣ್ಣದ ಕಾಟನ್ ಡ್ರೆಸ್ ಧರಿಸಿದ್ದರ ಬಗ್ಗೆ ವೆಬ್ ಸೈಟ್ ಒಂದು ಸೆಕ್ಸಿ ಡ್ರೆಸ್ ಎಂದು ವರ್ಣಿಸಿ ಬರಹ ಪ್ರಕಟಿಸಿತ್ತು. ಸಹೋದರಿಯ ಬಗ್ಗೆ ಇಂಥ ಬರಹದಿಂದ  ಕೋಪಗೊಂಡಿರುವ ಅರ್ಜುನ್ ಕಪೂರ್, ಇಂಥ ಬರಹ ಬರೆದವರಿಗೆ ನಾಚಿಕೆಯಾಗಬೇಕು. ನಿಮ್ಮ ಕಣ್ಣು ಏನನ್ನು ಹುಡುಕುತ್ತದೆ ಅನ್ನೋದು ಇದರಲ್ಲೇ ಗೊತ್ತಾಗುತ್ತೆ ಎಂಬುದಾಗಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕೂಡಾ ಜಾಹ್ನವಿ ಬೆಂಬಲಕ್ಕೆ ನಿಂತಿದ್ದಾರೆ. ನಟಿ ಶ್ರೀದೇವಿ ಮರಣದ ಬಳಿಕ ಅರ್ಜುನ್ ಕಪೂರ್ ಹಾಗೂ  ಮಲತಾಯಿ ಶ್ರೀದೇವಿ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಸಂಬಂಧ ಇನ್ನಷ್ಟು ಸುಧಾರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...