alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ‌ ಬಾಲಿವುಡ್ ಜೋಡಿ ಹಕ್ಕಿ

ಬಾಲಿವುಡ್ ತಾರೆ ಮಲೈಕಾ ಅರೋರಾ ತಮ್ಮ‌ ಪತಿ ಅರ್ಬಾಜ್ ಖಾನ್ ರಿಂದ ಬೇರಾಗಿ, ಅರ್ಜುನ್ ಕಪೂರ್ ಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಗುಸು ಗುಸು ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ

ಮಲೈಕಾ ಹಾಗೂ ಅರ್ಜುನ್ ಅವರು‌ ಜೋಡಿ ಹಕ್ಕಿಗಳ ಹಾಗೆ ತಿರುಗಾಡಿಕೊಂಡಿದ್ದರೂ, ಈ‌ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಶನಿವಾರ ಬಾಲಿವುಡ್ ವಿನ್ಯಾಸಕಾರ ಸಂದೀಪ್ ಕೋಸ್ಲಾ ಆಯೋಜಿಸಿದ್ದ ಡಿನ್ನರ್ ಗೆ ಒಂದೇ ಕಾರಿನಲ್ಲಿ ಆಗಮಿಸಿ, ಒಟ್ಟಿಗೆ ಇದ್ದರು. ಇದು ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಗುಸು ಗುಸುಗೆ ಇಂಬು ನೀಡಿದೆ.

ಈಗಾಗಲೇ ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ನಿಸ್ಸಂಕೋಚವಾಗಿ ಒಂದೇ ಕಡೆ ಕುಳಿತುಕೊಂಡಿದ್ದ ಈ‌ ಜೋಡಿ ಹಕ್ಕಿಗಳು ಸದ್ಯದಲ್ಲಿಯೇ ತಮ್ಮಿಬ್ಬರ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಮಲೈಕಾ, ಸದ್ಯ ಇಂಡಿಯಾ ನೆಕ್ಸ್ಟ್ ಟಾಪ್ ಮಾಡೆಲ್ 4 ರಿಯಾಲಿಟಿ ಶೋನಲ್ಲಿ‌ ಬ್ಯುಸಿಯಾಗಿದ್ದರೆ, ಅರ್ಜುನ್, ಸುಂದೀಪ್ ಔರ್ ಪಿಂಕಿ ಫರಾರ್, ನಮಸ್ತೆ ಇಂಗ್ಲೆಂಡ್ ಚಿತ್ರೀಕರಣದಲ್ಲಿ‌ ತೊಡಗಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...